ಕಲಬುರ್ಗಿ : ಕಲಬುರ್ಗಿಯಲ್ಲಿ ಇಂದು ಭೀಕರವಾದಂತಹ ರಸ್ತೆ ಅಪಘಾತ ಸಂಭವಿಸಿದ್ದು, ಕ್ರಷರ್ ಹಾಗೂ ಬೈಕ್ ಮುಖಾಂತರ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿದ್ದರೆ ಕ್ರಷರ್ ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಕಲಬುರ್ಗಿ ನಗರದ ಹೊರವಲಯದ ಅಪಘಾತ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಕೆರೂರ್ ಗ್ರಾಮದ ನಿವಾಸಿ ಉಮೇಶ್ ಹರಿರಾಮ್ ಚೌಹಾಣ್ (39) ಎಂದು ಗುರುತಿಸಲಾಗಿದೆ. ಕ್ರಷರ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಅದೇ ಗ್ರಾಮದ ಕ್ರಷರ್ ಚಾಲಕ ಕೃಷ್ಣ ನಾಗೇಶ್ ಬೋರೆ, ಅಲಗುಡ್ ಕ್ರಾಸ್ ನಿಂದ ಕಾರ್ಖನೆಯೊಂದರ ಕೂಲಿ ಕಾರ್ಮಿಕರಿಗೆ ಕೂರಿಸಿಕೊಂಡು ಹೇರೂರು ಗ್ರಾಮದ ಕಡೆ ತೆರಳುತ್ತಿದ್ದ. ಚಾಲಕ ಕೃಷ್ಣ ಅತಿವೇಗದಿಂದ ಕ್ರಷರ್ ಚಲಾಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.