ಶಿವಮೊಗ್ಗ: ರಾಜ್ಯದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಕಾಲೇಜಿನಲ್ಲೇ ದಿಢೀರ್ ಕುಸಿದು ಬಿದ್ದಂತ ಪಿಯುಸಿ ಓದುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳು ( ಕಾಲೇಜು ಹಾಗೂ ಪೋಷಕರ ಮನವಿಯ ಮೇರೆಗೆ ಹೆಸರು ಗೌಪ್ಯವಾಗಿ ಇಡಲಾಗಿದೆ) ಸಾವನ್ನಪ್ಪಿದ್ದಾಳೆ.
ಶಿವಮೊಗ್ಗದ ವಿದ್ಯಾನಗರದ ಬಳಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳ ಕಾಲೇಜಿಗೆ, ಪ್ರೌಢ ಶಾಲಾ ಶಿಕ್ಷಕರು ಆಗಮಿಸಿದ್ದ ವಿಷಯ ತಿಳಿದು ಬಂದಿತ್ತು. ತನ್ನ ಪ್ರೌಢ ಶಾಲೆಯ ಶಿಕ್ಷಕರನ್ನು ಭೇಟಿಯಾಗಿ ಮಾತನಾಡಿಸೋದಕ್ಕೆ ಪಿಯು ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ಸಹಪಾಠಿಗಳೊಂದಿಗೆ ವಿದ್ಯಾರ್ಥಿನಿಯೊಬ್ಬಳು ತೆರಳುತ್ತಿದ್ದಳು.
ಪ್ರಾಂಶುಪಾಲರ ಕೊಠಡಿಯ ಬಾಗಿಲು ತೆಗೆದು ಇನ್ನೇನು ಒಳಗೆ ಹೋಗಿ, ಮಾತನಾಡಿಸಬೇಕು ಎನ್ನುವಷ್ಟರಲ್ಲೇ ಬಾಗಿಲ ಬಳಿಯಲ್ಲೇ ದಿಢೀರ್ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ವಾಹನದಲ್ಲಿ ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲೇ ಮಾರ್ಗಮಧ್ಯೆ ಕೊನೆಯುಸಿರು ಎಳೆದಿರುವುದಾಗಿ ತಿಳಿದು ಬಂದಿದೆ.
ಪಿಯು ಕಾಲೇಜಿನ ವಿದ್ಯಾರ್ಥಿನಿ ದಿಢೀರ್ ಕುಸಿದು ಬಿದ್ದು, ಅಸ್ವಸ್ಥಗೊಂಡ ದೃಶ್ಯ ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ಸಹಪಾಠಿ ಗೆಳತಿ ಸಾವನ್ನಪ್ಪಿದ್ದನ್ನು ಕಂಡ ವಿದ್ಯಾರ್ಥಿನಿಯರು ಮಮ್ಮಲ ಮರುಗಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!
ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಜ.31, 2025 ರವರೆಗೆ ವಿಸ್ತರಿಸಿದ EPFO