ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಹೈಕೋರ್ಟ್ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್, ಪವಿತ್ರ ಗೌಡ, ನಾಗರಾಜು, ಅನು ಕುಮಾರ್, ಎಂ ಲಕ್ಷ್ಮಣ್, ಜಗದೀಶ್ ಹಾಗೂ ಪ್ರದೋಷ್ ರಾವ್ ಗೆ ಹೈಕೋರ್ಟ್ ಜಾಮೀನು ನೀಡಿದೆ.
ಹೈಕೋರ್ಟ್ ನಿಂದ ಜಾಮೀನು ಪ್ರತಿ ಸಿಕ್ಕಿದ್ದು ಕೂಡಲೇ ಜೈಲಿನ ಮುಖ್ಯ ಅಧಿಕಾರಿಗಳಿಗೆ ತಲುಪಿಸಗಿದೆ. ಈ ಹಿನ್ನೆಲೆಯಲ್ಲಿ ಇಂದು ಜೈಲಿಂದ ಅವರು ರಿಲೀಸ್ ಆಗಿದ್ದು, ಆರ್.ಆರ್ ನಗರದ ಮನೆಗೆ ಪವಿತ್ರಾಗೌಡ ತೆರಳಿದ್ದಾರೆ.