ಅಮೃತಸರ : ಪಂಜಾಬ್‌ನ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆ ಬಳಿ ಇಂದು ಮುಂಜಾನೆ ಭಾರೀ ಅನುಮಾನಾಸ್ಪದ ಸ್ಫೋಟದ ಸದ್ದು ಕೇಳಿಬಂದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಸ್ಫೋಟದ ಸದ್ದು ಕೇಳಿಬಂದಿದ್ದು, ಆ ಭಾಗದ ಜನರು ಭಯಭೀತರಾಗಿದ್ದರು ಎಂದು ಹೇಳಲಾಗುತ್ತಿದೆ.
ದರೋಡೆಕೋರ ಜೀವನ್ ಫೌಜಿ ಈ ಸ್ಫೋಟದ ಹೊಣೆ ಹೊತ್ತಿದ್ದಾನೆ. 3 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಫೋಟದ ರಭಸಕ್ಕೆ ಮನೆಯೊಳಗಿನ ಗೋಡೆಗಳು ಬಿರುಕು ಬಿಟ್ಟಿವೆ. ಇಸ್ಲಾಮಾಬಾದ್ ಪೊಲೀಸ್ ಠಾಣೆಯಲ್ಲಿ ಸ್ಫೋಟದ ಹೊಣೆಯನ್ನು ದರೋಡೆಕೋರ ಜೀವನ್ ಫೌಜಿ ವಹಿಸಿಕೊಂಡಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೂ ಮುನ್ನ ಅಮೃತಸರದ ಮಜಿತಾ ಪೊಲೀಸ್ ಠಾಣೆ ಸಮೀಪ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಪೊಲೀಸ್ ಠಾಣೆಯ ಕಿಟಕಿ ಗಾಜುಗಳು ಒಡೆದಿವೆ. ಈ ಸ್ಫೋಟದ ನಂತರ, ಪ್ರದೇಶದಲ್ಲಿ ಭೀತಿ ಹರಡಿತು. ಪೊಲೀಸ್ ಠಾಣೆ ಗೇಟ್ ಬಳಿಯ ತೆರೆದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ನಂತರ ಪೊಲೀಸ್ ಠಾಣೆಯ ಗೇಟ್‌ಗಳನ್ನು ಮುಚ್ಚಲಾಗಿತ್ತು.