ನವದೆಹಲಿ : 1971ರ ಯುದ್ಧದ ವಿಜಯವನ್ನ ಸ್ಮರಿಸಿ ಇಂದು ಇಡೀ ದೇಶ ವಿಜಯ್ ದಿವಸ್ ಆಚರಿಸುತ್ತಿದೆ. 1971ರ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಸೇನೆಯನ್ನ ಮಂಡಿಯೂರುವಂತೆ ಮಾಡಿ ಶರಣಾಗುವಂತೆ ಮಾಡಿತ್ತು. ಅಲ್ಲದೆ ಪೂರ್ವ ಪಾಕಿಸ್ತಾನವನ್ನ ಪಾಕಿಸ್ತಾನದ ಕ್ರೌರ್ಯದಿಂದ ಮುಕ್ತಗೊಳಿಸಿ ಇಂದಿನ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯವನ್ನ ನೀಡಿತು. ಈ ಅವಧಿಯಲ್ಲಿ, ಭಾರತೀಯ ಸೇನೆಯು 93,000 ಪಾಕಿಸ್ತಾನಿ ಸೈನಿಕರನ್ನ ಶರಣಾಗುವಂತೆ ಮಾಡಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಸಂಖ್ಯೆಯಾಗಿತ್ತು. ಈ ಕುರಿತು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 1971ರ ಯುದ್ಧದಲ್ಲಿ ಪಾಲ್ಗೊಂಡ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯೋಧರಿಗೆ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ ಶ್ರದ್ಧಾಂಜಲಿ.!
ಪ್ರಧಾನಿ ಮೋದಿ, “ಅಸಾಧಾರಣ ಶೌರ್ಯ ಮತ್ತು ಅವರ ಅಚಲ ಮನೋಭಾವಕ್ಕೆ ಗೌರವವಾಗಿದೆ, ಅದು ಯಾವಾಗಲೂ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಮತ್ತು ನಮ್ಮ ದೇಶದ ಇತಿಹಾಸದಲ್ಲಿ ಆಳವಾಗಿ ನೆಲೆಯೂರಿದೆ” ಎಂದಿದ್ದಾರೆ.
ಇನ್ನು ಈ ದಿನವನ್ನು ನೆನಪಿಸಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಇಂದು ವಿಜಯ್ ದಿವಸ್ನ ವಿಶೇಷ ಸಂದರ್ಭದಲ್ಲಿ, ರಾಷ್ಟ್ರವು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ನಮನ ಸಲ್ಲಿಸುತ್ತದೆ. ಅವರ ಅಚಲ ಧೈರ್ಯ ಮತ್ತು ದೇಶಭಕ್ತಿ ನಮ್ಮ ದೇಶವನ್ನ ಸುರಕ್ಷಿತವಾಗಿರಿಸಿದೆ. ಅವರ ತ್ಯಾಗ ಮತ್ತು ಸೇವೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ” ಎಂದಿದ್ದಾರೆ.
BREAKING : ಭಾರತ-ಶ್ರೀಲಂಕಾ ಸಂಬಂಧ ಮತ್ತಷ್ಟು ಬಲಷ್ಠ ; ‘ಪ್ರಧಾನಿ ಮೋದಿ, ದಿಸ್ಸಾನಾಯಕೆ’ ಪ್ರಮುಖ ನೀತಿ ಅನಾವರಣ
BIG NEWS: ‘ಫೋನ್ ಪೇ’ ಮೂಲಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ‘PDO’
ಗರ್ಭಿಣಿ ‘ಪತ್ನಿ’ ಜೊತೆ ಇರಲು ರಜೆ ನಿರಾಕರಣೆ ; ಮನನೊಂದ ‘ಪೊಲೀಸ್ ಕಮಾಂಡೋ’ ಆತ್ಮಹತ್ಯೆ