ಮಂಡ್ಯ : ಡಿಸೆಂಬರ್ 20 ರಿಂದ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೀಗ ವಾಮಾಚಾರದ ಭೀತಿ ಶುರುವಾಗಿದ್ದು, ಸಮ್ಮೇಳನ ನಡೆಯುವ ಅನತಿ ದೂರದಲ್ಲಿ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಅರಿಸಿನ ಕುಂಕುಮದಿಂದ ಪೂಜೆ ಮಾಡಲಾಗಿದೆ.
ಕ.ಸಾ.ಪ ಸಮ್ಮೇಳನದಲ್ಲಿ ಮಾಂಸಹಾರಿಗಳ ಹೋರಾಟದ ಕಿಚ್ಚಿನ ನಡುವೆ ಆಯೋಜನಕರಿಗೆ ಮತ್ತೊಂದು ತಲೆ ನೋವು ಶುರುವಾಗಿದ್ದು, ಪ್ರಧಾನ ವೇದಿಕೆ ಹಿಂಭಾಗದ ಗಣ್ಯರ ಪಾರ್ಕಿಂಗ್ ಸ್ಥಳದಲ್ಲಿ ವಾಮಾಚಾರ ಮಾಡಲಾಗಿದ್ದು, ಡಿಸೆಂಬರ್ 20 ರಿಂದ22 ನೇ ತಾರೀಖಿನವರೆಗೆ ಕಸಾಪ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ವೇದಿಕೆ ಹಿಂಭಾಗ ಮಾಡಿರೋ ವಾಮಾಚಾರಕ್ಕೆ ಆಯೋಜಕರು ಬೆಚ್ಚಿ ಬಿದ್ದಿದ್ದಾರೆ. ಸಮ್ಮೇಳನದ ವೇಳೆ ಏನಾದರು ಅವಘಡ ಸಂಭವಿಸುವ ಆತಂಕದಲ್ಲಿದ್ದಾರೆ ಆಯೋಜಕರು.