ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಕೆಲ ದಿನಗಳ ಹಿಂದೆ ನಡೆಸಲಾಗಿದ್ದಂತ ಪಿಡಿಓ ಪರೀಕ್ಷೆಯ ಪರಿಷ್ಕೃತ ಕೀ ಉತ್ತರವನ್ನು ಪ್ರಕಟಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರು ಮಾಹಿತಿ ಹಂಚಿಕೊಂಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಹೈ.ಕ) ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 17-11-2024ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು ಎಂದಿದ್ದಾರೆ.
ಸಾಮಾನ್ಯ ಜ್ಞಾನ ಪತ್ರಿಕೆ1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ದಿನಾಂಕ 19-11-2024ರಂದು ಪ್ರಕಟಿಸಿ, ಅಭ್ಯರ್ಥಿಗಳು ಕೀ ಉತ್ತರಗಳಿಗೆ ಸಂಬಂಧಿಸದಂತೆ ಸಲ್ಲಿಸಲು ದಿನಾಂಕ 26-11-2024ರವರೆಗೆ ಕಾಲಾವಕಾಶ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಕಾಲಾವಕಾಶದ ನಂತ್ರ ಬಂದಂತ ಆಕ್ಷೇಪಣೆಗಳನ್ನು ಪರಿಶೀಲಿಸಿ ಆಯೋಗದ ವೆಬ್ ಸೈಟ್ ನಲ್ಲಿ ಪಿಡಿಓ ಪರೀಕ್ಷೆಯ ಪರಿಷ್ಕೃತ ಕೀ-ಉತ್ತರವನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.
Shocking News: ಶೈತ್ಯೀಕರಿಸಿದ ಕಚ್ಚಾ ಹಾಲಿನಲ್ಲಿ ಫ್ಲೂ ವೈರಸ್ ಐದು ದಿನಗಳವರೆಗೆ ಇರುತ್ತೆ: ಅಧ್ಯಯನ