ರಾಯಚೂರು : ರಾಜ್ಯದಲ್ಲಿ ಮತ್ತೊಂದು ಭೀಕರವಾದಂತಹ ಘಟನೆ ಸಂಭವಿಸಿದ್ದು ಸೊಸೆಯ ಮೇಲೆ ಪಾಪಿ ಮಾವನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ಸಲಕೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಜುಲಮಗೇರ ಎಂಬಲ್ಲಿ ನಡೆದಿದೆ.
ಹೌದು ಸಲಕೆಯಿಂದ ಹೊಡೆದು ಸೊಸೆಯನ್ನೇ ಮಾವ ಕೊಲೆ ಮಾಡಿದ್ದಾನೆ. ರಾಯಚೂರಿನ ಜುಲಮಗೆರದಲ್ಲಿ ಈ ಒಂದು ಘಟನೆ ನಡೆದಿದೆ. ಸೊಸೆ ದುಳ್ಳಮ್ಮನನ್ನು (27) ಮಾವ ರಾಮಲಿಂಗಯ್ಯ ಹತ್ಯೆಗೈದಿದ್ದಾನೆ. ಸೊಸೆ ಮೇಲೆ ಅತ್ಯಾಚಾರಕ್ಕೆ ರಾಮಲಿಂಗಯ್ಯ ಮುಂದಾಗಿದ್ದನೆ. ಈ ವೇಳೆ ವಿರೋಧ ಮಾಡಿದ್ದಕ್ಕೆ ಸೊಸೆಯನ್ನೇ ಮಾವ ಹತ್ಯೆಗೈದಿದ್ದಾನೆ.
ಈ ಹಿಂದೆಯೂ ಕೂಡ ಎರಡು ಮೂರು ಬಾರಿ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಗ್ರಾಮದ ಹಿರಿಯರು ಸೇರಿ ರಾಮಾಯಲಿಂಗಯ್ಯಗೆ ಬುದ್ಧಿ ಕೂಡ ಹೇಳಿದ್ದರು. ಕೊಲೆ ಮಾಡಿ ಸದ್ಯ ಪರಾರಿಯಾಗಿರುವ ರಾಮಲಿಂಗಯ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತಂತೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.