ಮಂಡ್ಯ : ಕಳೆದ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಹೃದಯಘಾತದಿಂದ ನಿಧನ ಹೊಂದಿದ್ದರು. ಇದೀಗ ಅವರ ಆಸ್ತಿಯನ್ನು ಎಸ್ ಎಂ ಕೃಷ್ಣ ಮೊಮ್ಮಗ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಳಿಯ ರಾದ ಅಮರ್ತ್ಯ ಹೆಗಡೆ ಅವರು ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ.
ಹೌದು ಇಂದು ಎಸ್.ಎಂ ಕೃಷ್ಣ ಅವರ ಅಸ್ಥಿಯನ್ನುಮೊಮ್ಮಗ ಅಮರ್ತ್ಯ ಹೆಗಡೆ ವಿಸರ್ಜನೆ ಮಾಡಿದರು. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಿದರು.
ಕಳೆದ ಡಿಸೆಂಬರ್ 10 ರಂದು ಎಸ ಎಂ ಕೃಷ್ಣ ಅವರು ಬೆಂಗಳೂರು ನಗರದ ಸದಾಶಿವನಾಗರದಲ್ಲಿ ತಡರಾತ್ರಿ ತೀವ್ರ ಹೃದಯಘಾತದಿಂದ ಸಾವನ್ನಪ್ಪಿದರು. ಇವರ ಒಂದು ಸಾವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಪಕ್ಷದ ನಾಯಕರು ತೀವ್ರ ಸಂತಾಪ ಸೂಚಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೂಡ ಎಸ್ಎಂ ಕೃಷ್ಣ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದರು.