ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಉದ್ಯಮಿ ಸುತಾರಿಯ ಮನೆಯಲ್ಲಿ ದರೋಡೇ ನಡೆದಿದೆ. ದರೋಡೆಗೂ ಮುನ್ನ ಕಾವಲುಗಾರನ್ನ ಕಟ್ಟಿ ಹಾಕಿದ್ದು ಅಲ್ಲದೆ ಮನೆಯವರನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿಹಾಕಿ ದರೋಡೆಕೋರರು ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಮನೆಯ ಕಾವಲುಗಾರನ ಕೈಕಾಲು ಕಟ್ಟಿ ಹಾಕಿದ ಕಳ್ಳರ ಗ್ಯಾಂಗ್ ಬಳಿಕ ಮನೆಯಲ್ಲಿದ್ದವರನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿದ್ದಾರೆ. ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.