ಉತ್ತರಪ್ರದೇಶ : ಪತ್ನಿಯ ಕಾಟಕ್ಕೆ ಮನನೊಂದು ಟೆಕ್ಕಿ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಪತ್ನಿ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಸಂಗಾತಿಯ ಕೊಂಕು ಮಾತಿನಿಂದ ಮನನೊಂದು ಮತ್ತೊಬ್ಬ ಟಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಹೌದು ಆತ್ಮಹತ್ಯೆ ಮಾಡಿಕೊಂಡಂತಹ ಟೆಕ್ಕಿಯನ್ನು ಮಯಾಂಕ್ ಚಂದೆಲ್ ಎಂದು ಗುರುತಿಸಲಾಗಿದೆ. ಕೆಲಸವಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿದ್ದರು, ಜತೆಗೆ ತನ್ನ ಸಂಗಾತಿಯ ಕುಹಕ ಮಾತುಗಳನ್ನು ಕೇಳಿ ಮತ್ತಷ್ಟು ಡಿಪ್ರೆಶನ್ಗೆ ಹೋಗಿದ್ದರು. ಉತ್ತರ ಪ್ರದೇಶದ ಜಲಾಲಾಬಾದ್‌ನವರಾದ ಚಂದೇಲ್, ಬಂಡಾ ಮೂಲದ ಮಹಿಳೆಯೊಂದಿಗೆ ಸುಮಾರು ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ನೋಯ್ಡಾದ ಸೆಕ್ಟರ್ 73 ರಲ್ಲಿ ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಡೆತ್ನೋಟ್ನಲ್ಲಿ ಏನೂ ಕೆಲಸವಿಲ್ಲ, ಇಡೀ ದಿನ ಮನೆಯಲ್ಲಿ ಕೂತು ತಿನ್ನೋದೊಂದೇ ಕೆಲಸ ಎನ್ನುವ ಮಾತು ತೀರಾ ಮನಸ್ಸು ಹಾಳುಮಾಡಿತ್ತು.
ಈ ಎಲ್ಲಾ ಕಾರಣಗಳಿಂದಾಗಿ ತಾನು ಸಾಯುವ ನಿರ್ಧಾರ ಮಾಡಿದ್ದೇನೆ ಎಂದು ಬರೆದಿದ್ದರು. ಲಿವ್ ಇನ್ ಸಂಗಾತಿಯ ಕೊಂಕು ಮಾತಿನಿಂದ ಬೇಸತ್ತು ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಸಮಯದಿಂದ ಟೆಕ್ಕಿಗೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದರು. ಇದೇ ವಿಚಾರವಾಗಿ ಪದೇ ಪದೇ ಗೆಳತಿ ಕೊಂಕು ಮಾತನಾಡುತ್ತಿದ್ದಳು, ಅದನ್ನು ಕೇಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸ್ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸುತ್ತಿದೆ.








