ಬೆಂಗಳೂರು : ಪತ್ನಿಯ ಕಿರುಕುಳ ತಾಳಲಾರದೆ ಇತ್ತೀಚೆಗೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಅತುಲ್ ಸುಭಾಷ್ ಪತ್ನಿ, ಅತ್ತೆ ಹಾಗೂ ಸೇರಿದಂತೆ ಮೂವರು ಆರೋಪಿಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಪೊಲೀಸರು ನಿನ್ನೆ ಬೆಳಿಗ್ಗೆ ಮೂವರನ್ನು ಬಂಧಿಸಿದ್ದು ರಾತ್ರಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು ಇದೀಗ ನಾಲ್ವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಹೌದು ಪತ್ನಿಯ ಕಿರುಕುಳಕ್ಕೆ ಬೇಸತ್ತು ಟಕ್ಕಿ ಅತುಲ್ ಸುಭಾಷ್ ಸುಮಾರು 24 ಪುಟಗಳಷ್ಟು ಟೆಕ್ನೋಟ್ ನಲ್ಲಿ ಪತ್ನಿ ಹಾಕಿರುಕೊಳ್ಳದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯ, ನೀಶಾ, ಹಾಗೂ ಅನುರಾಗ್ ಸಿಂಘಾನಿಯ ಅವರನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ?
ಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ ಸೂಸೈಡ್ ಮಾಡಿಕೊಳ್ತಾರೆ. ಅವರು ಸೂಸೈಡ್‌ಗೂ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಮತ್ತು 90 ನಿಮಿಷದ ವಿಡಿಯೋವನ್ನು ಮಾಡಿದ್ದಾರೆ.ಈ ಹಿನ್ನೆಲೆ ಜೌನ್‌ಪುರದಲ್ಲಿರುವ ಅತುಲ್ ಸುಭಾಷ್ ಅವರ ಪತ್ನಿಯ ನಿವಾಸದ ಹೊರಗೆ ಪೊಲೀಸರು ನೊಟೀಸ್ ಅಂಟಿಸಿ ಬಂದಿದ್ದರು. ಅದರಲ್ಲಿ ‘ನಿಮ್ಮನ್ನು ವಿಚಾರಣೆ ಮಾಡಲು ಸಮಂಜಸವಾದ ಆಧಾರಗಳಿವೆ. ಮೂರು ದಿನಗಳೊಳಗೆ ಬೆಂಗಳೂರಿನ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೀಗ ಪೊಲೀಸರು ಪತ್ನಿ ನಿಕಿತಾ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.