ಹಾವೇರಿ : ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿಗೆ ಬೆಂಕಿ ತಗುಲಿ ಪಟಾಕಿ ಸಿಡಿದ ಪರಿಣಾಮ, ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರಿನ ಮಾಲತೇಶ್ ನಗರದ ಮನೆಯಲ್ಲಿ ಒಂದು ಘಟನೆ ನಡೆದಿದೆ.
ಪಟಾಕಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬೆಂಕಿಯಲ್ಲಿ ಷಣ್ಮುಖಪ್ಪ ದೇವಗಿರಿ (55)ಎನ್ನುವ ವ್ಯಕ್ತಿ ಸುಟ್ಟು ಕರಕಲಾಗಿದ್ದಾರೆ ಎಂದು ಬಂದಿದೆ. ಗಣೇಶ ಹಬ್ಬ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಿ ಉಳಿದಿದ್ದ ಪಟಾಕಿಯನ್ನು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದರು ಎನ್ನಲಾಗಿದೆ.
ಪಟಾಕಿಗೆ ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಪಟಾಕಿ ಸಂಗ್ರಹಿಸಿ ಇಟ್ಟಿದ್ದ ಜಾಗದಲ್ಲಿ ಷಣ್ಮುಖಪ್ಪ ದೇವಗಿರಿ ಮಲಗಿದ್ದರು. ಈ ವೇಳೆ ಬೆಂಕಿ ತಗೊಳ್ಳಿ ಪಟಾಕಿ ಸಿಟಿದು ಷಣ್ಮುಖಪ್ಪ ಸ್ಥಳದಲ್ಲಿ ಸಾವನಪ್ಪಿದ್ದಾರೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.