ಬೆಂಗಳೂರು : ಸಾಮಾನ್ಯವಾಗಿ ಬಸ್ ನಿಲ್ದಾಣ, ದೇವಸ್ಥಾನ ಸೇರಿದಂತೆ ಹಲವು ಜನನಿಬೀಡ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡುವುದನ್ನು ನಾವು ನೋಡಿರುತ್ತೇವೆ ಆದರೆ ಇದೀಗ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಕೂಡ ವ್ಯಕ್ತಿ ಒಬ್ಬ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ.
ಹೌದು ನಮ್ಮ ಮೆಟ್ರೋ ಟ್ರೈನ್ ನಲ್ಲಿ ವಿಶೇಷ ಚೇತನ ವ್ಯಕ್ತಿ ಒಬ್ಬ ಸಹ ಪ್ರಯಾಣಿಕರ ಬಳಿ ಭಿಕ್ಷೆ ಬೇಡಿರುವ ಘಟನೆ ನಡೆದಿದೆ. ಚೆಲ್ಲಕಟ್ಟದಿಂದ ವೈಟ್ಫೀಲ್ಡ್ ವರೆಗೆ ಮೆಟ್ರೋ ಟ್ರೈನ್ ಸಂಚರಿಸುತ್ತಿತ್ತು ಈ ವೇಳೆ ಪ್ರಯಾಣಿಕರ ಸೋಗಿನಲ್ಲಿ ಬಂದಂತಹ ವಿಶೇಷ ಚೇತನ ವ್ಯಕ್ತಿ ಒಬ್ಬ ಸಹಪ್ರಾಣಿಕರ ಬಳಿ ಭಿಕ್ಷೆ ಬೇಡಿದ್ದಾನೆ.
ತನ್ನ ದೈಹಿಕ ಊನವನ್ನು ತೋರಿಸಿ ಭಿಕ್ಷಾಟನೆ ಮಾಡಿದ್ದನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದು ಭಿಕ್ಷೆ ಬೇಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈಗ ನಮ್ಮ ಮೆಟ್ರೋದಲ್ಲೂ ಭಿಕ್ಷಾಟನೆ ಶುರುವಾಯಿತಾ ಎಂದು ಪ್ರಶ್ನಿಸಿದ್ದಾರೆ.