ಹಾವೇರಿ : ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟಿದ್ದಕ್ಕೆ ಅಪಘಾತ ನಡೆದಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಂದೆಗೆ 27 ಸಾವಿರ ರೂಪಾಯಿ ದಂಡ ವಿಧಿಸಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಜೆಎಂಎಫ್ಸಿ ಕೋರ್ಟ್ ಆದೇಶ ಹೊರಡಿಸಿದೆ.
ಹೌದು ಮಗನಿಗೆ ಬೈಕ್ ಕೊಟ್ಟಿದ್ದಕ್ಕೆ ಇದೀಗ ತಂದೆಗೆ ಕೋರ್ಟ್ 27,000 ದಂಡ ಹಾಕಿದೆ. ತಂದೆಯೊಬ್ಬರು ತಮ್ಮ ಮಗನಿಗೆ ಬೈಕ್ ನೀಡಿದ್ದರು. ಈ ವೇಳೆ ಅಪಘಾತ ಒಂದು ನಡೆದಿತ್ತು. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಮಗನಿಗೆ ಬೈಕ್ ಅಪಘಾತ ನೀಡಿದ್ದರಿಂದ ಕೇಸ್ ದಾಖಲಾಗಿತ್ತು. ರಾಣೆಬೆನ್ನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.