ಕಲಬುರ್ಗಿ : ಕೇವಲ ಒಂದು ಹುಡುಗಿಗೋಸ್ಕರ ಅಪ್ರಾಪ್ತರ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಬಡಿಗೆ, ಕಲ್ಲುತೂರಾಟ ನಡೆಸಿ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿರುವ ಘಟನೆ ಕಲಬುರ್ಗಿ ನಗರದ ಸಂಗಮೇಶ್ವರ ಕಾಲೋನಿ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ಈ ಒಂದು ಗ್ಯಾಂಗ್ ವಾರ್ ನಡೆದಿದ್ದು, ಘಟನೆಯನ್ನು ಕಂಡು ಕಲ್ಬುರ್ಗಿ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆರ್.ಜಿ ನಗರ ಠಾಣೆಯ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ಒಂದು ಗ್ಯಾಂಗ್ ವಾರ್ ನಡೆದಿದ್ದು, ಎರಡು ಗ್ಯಾಂಗ್ಗಳಲ್ಲಿ ಬಹುತೇಕ ವಿದ್ಯಾರ್ಥಿಗಳೇ ಇದ್ದರೂ ಎನ್ನಲಾಗಿದೆ. ಹುಡುಗಿಯ ವಿಷಯದ ಕುರಿತಂತೆ ಈ ಒಂದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಹುಡುಗಿಯೊಬ್ಬಳಿಗೆ ಒಂದು ಗುಂಪಿನವರು ಮೆಸೇಜ್ ಕಳಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಎರಡು ಗುಂಪುಗಳ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳು ಕುಡಿದ ನಶೆಯಲ್ಲಿ ಬಡಿದಾಡಿಕೊಳ್ಳುತ್ತಿರುವುದು ಕಲಬುರಗಿ ನಗರದಲ್ಲಿ ಇಂಥ ಬೆಳವಣಿಗೆ ಕಂಡು ನಾಗರಿಕರು ಬೆಚ್ಚಿಬಿದ್ದಿದ್ದಾರೆ.ಸದ್ಯ ಘಟನೆ ಸಂಬಂಧ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.