ಹಾಸನ : ಬ್ಯಾಂಕ್ ನಲ್ಲಿ ಹಾಗೂ ಇತರೆ ವೈಯಕ್ತಿಕ ಕೈ ಸಾಲ ಮಾಡಿಕೊಂಡಂತಹ ದಂಪತಿಗಳು ಸಾಲ ತೀರಿಸಲಾಗದೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದಿದೆ.
ಹೌದು ಸಾಲಭಾದೆಗೆ ಮನನೊಂದು ರೈತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದಂಪತಿಗಳನ್ನ ನಟೇಶ್ ಹಾಗೂ ಚಿನ್ನಮ್ಮ ಎಂದು ತಿಳಿದುಬಂದಿದೆ. ಬ್ಯಾಂಕ್ ಹಾಗೂ ಕೈ ಸಾಲವನ್ನು ನಟೇಶ್ ಹಾಗು ದಂಪತಿ ಸಾಲ ಮಾಡಿಕೊಂಡಿದ್ದರು.ಸಾಲ ತೀರಿಸಲಾಗಿದೆ ನಟೇಶ್ ಮತ್ತು ಚಿನ್ನಮ್ಮ ದಂಪತಿ ಪರದಾಡುತ್ತಿದ್ದರು.
ಸಾಲದ ಹಣ ವಾಪಸ್ ಗೆ ಸಾಲ ಕೊಟ್ಟವರು ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತು ಬಾವಿಗೆ ಹಾರಿ ನಟೇಶ್ ಮತ್ತು ಚಿನ್ನಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ತಮ್ಮ ಜಮೀನಿನಲ್ಲಿರುವ ಬಾವಿಗೆ ಹಾರಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಡರಾತ್ರಿ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.