ಉತ್ತರಕನ್ನಡ : ನಿನ್ನೆ ಮುರುಡೇಶ್ವರ ಬೀಚ್ನಲ್ಲಿ ಪ್ರವಾಸಕ್ಕೆ ಎಂದು ಬಂದಿದ್ದ 7 ಜನ ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದರು.ಈ ವೇಳೆ ಕೂಡಲೇ ಬೀಚ್ ಬಳಿ ಇದ್ದ ಲೈಫ್ ಗಾಡ್ಸ್ ಸಿಬ್ಬಂದಿಗಳು ಮೂವರನ್ನು ರಕ್ಷಿಸಿದ್ದು ಓರ್ವ ವಿದ್ಯಾರ್ಥಿನಿ ಸಾವನಪ್ಪಿದ್ದಳು. ನಿನ್ನೆಯಿಂದ ಉಳಿದ ಮೂವರು ವಿದ್ಯಾರ್ಥಿನಿಯರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿತ್ತು, ಇದೀಗ ಉಳಿದ ಮೂವರ ವಿದ್ಯಾರ್ಥಿನಿಯರ ಶವ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ.
ಹೌದು ಬೋಟ್ ಮೂಲಕ ಕೊಚ್ಚಿ ಹೋಗಿದ್ದ ಉಳಿದ ಮೂವರ ವಿದ್ಯಾರ್ಥಿನಿಯರ ಶವಗಳನ್ನು ಕರಾವಳಿ ಕಾವಲು ಪಡೆ ಹೊರತೆಗೆದಿದೆ. ನೆನ್ನೆ ವಿದ್ಯಾರ್ಥಿನಿ ಶ್ರಾವಂತಿಯ ಶವ ಮಾತ್ರ ಪತ್ತೆಯಾಗಿತ್ತು.ಇದೀಗ ದೀಕ್ಷಾ (15) ಲಾವಣ್ಯ (15) ಮತ್ತು ವಂದನ (15)ಮೃತ ದೇಹಗಳನ್ನು ಇದೀಗ ಕರಾವಳಿ ಕಾವಲು ಪಡೆ ಹೊರ ತೆಗೆದಿದೆ.
ನಿನ್ನೆ ಮುರುಡೇಶ್ವರ ಬೀಚ್ ನಲ್ಲಿ 7 ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದರು. ಮೂರು ವಿದ್ಯಾರ್ಥಿಯರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿಗಳು ರಕ್ಷಿಸಿದ್ದರು.ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಡೇಶ್ವರ ಬೀಚ್ನಲ್ಲಿ ಈ ಒಂದು ಘಟನೆ ನಡೆದಿತ್ತು. ಪ್ರವಾಸಕ್ಕೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಆಗಮಿಸಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೋತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಎಂದು ತಿಳಿದುಬಂದಿದೆ.
ಇದೀಗ ಮೃತರ ವಿದ್ಯಾರ್ಥಿನಿಯರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಅಲ್ಲದೆ ಸದ್ಯಕ್ಕೆ ಮುರುಡೇಶ್ವರ ಸಮುದ್ರದ ಬೀಚ್ ಬಳಿ ಪ್ರವಾಸಿಗರಿಗೆ ನಿರ್ಬಂಧಿಸಿ ಕ್ರಮ ಕೈಗೊಂಡಿದ್ದು, ಬೀಚ್ ಬಳಿ ಪ್ರವಾಸಿಗರು ಕೆರಳದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.








