ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಘೋರ ದುರಂತ ಒಂದು ನಡೆದಿದ್ದು, ಇಬ್ಬರು ಬಾಲಕಿಯರು ಆಟವಾಡುತ್ತಲೆ ಕಾಲು ಜಾರಿ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅಮ್ಮಡಿ ಬಳಿಯ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ.
ಹೌದು ಮಧ್ಯಪ್ರದೇಶದ ನಜೀರಾಬಾದ್‌ನ ಸುನಿತಾ ಬಾಯಿ ಮತ್ತು ಅರ್ಜುನ್ ಸಿಂಗ್ ಅವರ ಮಕ್ಕಳಾದ ಸೀಮಾ(6) ಮತ್ತು ರಾಧಿಕಾ(2) ಮೃತಪಟ್ಟ ಮಕ್ಕಳು ಎಂದು ತಿಳಿದುಬಂದಿದೆ. ಮಧ್ಯಪ್ರದೇಶದಿಂದ ಬಂದು ಕೊಪ್ಪದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೀಮಾ ದಂಪತಿ ತೋಟದ ಮನೆಯಲ್ಲಿದ್ದರು.
ನಿನ್ನೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ತಾಯಿ ಸೀಮಾ ತೋಟದ ಕೆಲಸಕ್ಕೆ ತೆರಳಿದ್ದರು. ಸಂಜೆ 7 ಗಂಟೆ ವೇಳೆ ಮನೆಗೆ ಹಿಂದಿರುಗಿದಾಗ ಮಕ್ಕಳು ಕಾಣೆಯಾಗಿದ್ದರು. ಬಳಿಕ ಇತರ ಕಾರ್ಮಿಕರ ಜೊತೆಗೂಡಿ ಹುಡುಕಾಡಿದಾಗ 8 ಗಂಟೆ ವೇಳೆ ಬಾವಿಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








