ಗುಜರಾತ್ : ಅರ್ಚಕನೊಬ್ಬ ಕಾಳಿ ದೇವಿಯನ್ನು ಬಹಳ ನಿಷ್ಠೆಯಿಂದ ಪೂಜೆ ಮಾಡುತ್ತಿದ್ದ. ಕೊಠಡಿಯಲ್ಲಿ ಬೀಗ ಹಾಕಿಕೊಂಡು 24 ಗಂಟೆಗಳ ಕಾಲ ತೀವ್ರ ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದ. ಆದರೆ ಕಾಳಿದೇವಿ ತನಗೆ ಪ್ರತಿಕ್ಷವಾಗಿಲ್ಲವೆಂದು ಮನೆಯ ಅಂಗಳದಲ್ಲಿದ್ದ ಕಟ್ಟರ್ ಅನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ವಾರಾಣಾಸಿ ನಗರದ ಗಾಯ್ ಘಾಟ್ ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಅರ್ಚಕನನ್ನು ಅಮಿತ್ ಶರ್ಮಾ ಎಂದು ಗುರುತಿಸಲಾಗಿದ್ದು, ಇವರು ಮನೆಯ ಕೋಣೆಯೊಂದರಲ್ಲಿ ಕಾಳಿ ದೇವಿಯನ್ನು ಬಹಳ ನಿಷ್ಠೆಯಿಂದ ಆರಾಧಿಸುತ್ತಿದ್ದರು.ಈ ವೇಳೆ ತಮ್ಮ ಬಾಡಿಗೆ ಮನೆಯ ಅಂಗಳದಲ್ಲಿ ಕಟ್ಟರ್‌ನಿಂದ ಕತ್ತು ಸೀಳುವ ಮೊದಲು ದೇವರನ್ನು ಪ್ರಾರ್ಥಿಸಿದ್ದರು. ಆ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಪತ್ನಿಗೆ ತಾಯಿ ಕಾಳಿ ನೀನೇ ದಾರಿ ತೋರಿಸು ಎಂದು ಜೋರಾಗಿ ಕೂಗಿದ್ದರು.
ಪತಿ ಹೀಗೇಕೆ ಅರಚುತ್ತಿದ್ದಾರೆ ಎಂದು ಗಾಬರಿಯಾಗಿ ಅರ್ಚಕ ಅಮಿತ್ ಶರ್ಮಾ ಅವರ ಪತ್ನಿ ಗಾಬರಿಯಾಗಿ ಹೊರಗಡೆ ಬಂದಿದ್ದಾರೆ. ಪತಿ ಕತ್ತು ಸೇರಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದು ನೋಡಿ ದಂಗಾಗಿದ್ದಾರೆ, ಕೂಡಲೇ ಅಕ್ಕಪಕ್ಕದ ಜನರನ್ನು ಕರೆಸಿ ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅರ್ಚಕ ಅಮಿತ್ ಶರ್ಮ ಸಾವನ್ನಪ್ಪಿದ್ದರು. ಘಟನೆ ಸಂಭಂದಿಸಿದಂತೆ ಪೊಲೀಸರು ಪ್ರಕರಣದ ಕಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.
 
		



 




