ರಾಯಚೂರು : ಈಗಾಗಲೇ ಬಳ್ಳಾರಿಯಲ್ಲಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಹಾಗೂ ಶಿಶುಗಳ ಸಾವು ಪ್ರಕರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾಲ್ವರು ಬಾಣಂತಿಯರು ಹೆರಿಗೆ ದಾಖಲಾಗಿದ್ದರು ಈ ವೇಳೆ ಹೆರಿಗೆ ಬಳಿಕ ನಾಲ್ವರು ಬಾಣಂತಿಯರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಬಾಣಂತಿಯರನ್ನು ಚಂದ್ರಕಲಾ(26), ರೇಣುಕಮ್ಮ(32), ಮೌಸಮಿ ಮಂಡಲ್(22), ಹಾಗೂ ಚೆನ್ನಮ್ಮ ಎಂದು ಗುರುತಿಸಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಒಟ್ಟು 300 ಬಾಣಂತಿಯರ ಹೆರಿಗೆಯಾಗಿತ್ತು. ಅವರಲ್ಲಿ 7 ಬಾಣಂತಿಯರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ವೇಳೆ . ಅ.21 ರಂದು ಚನ್ನಮ್ಮ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆಯಾಗಿತ್ತು. ಅದಾದ 9 ದಿನಗಳ ಬಳಿಕ ಸಾವನ್ನಪ್ಪಿದ್ದರು. ಅ.22 ರಂದು ಆರ್‌ಎಚ್ ಕ್ಯಾಂಪ್-3ರಲ್ಲಿ ಮೌಸಮಿ ಮಂಡಲ್ ಹೆರಿಗೆಯಾಗಿತ್ತು. ಬಳಿಕ ಮಾರನೇ ದಿನ ಸಾವನ್ನಪ್ಪಿದ್ದರು. ಅ.31 ರಂದು ರೇಣುಕಮ್ಮ ಹೆರಿಗೆಯಾಗಿತ್ತು. ಮಾರನೇ ದಿನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
 
		



 




