ಮಂಡ್ಯ : ಮಾಜಿ ಸಿಎಂ ಹಾಗೂ ಮಾಜಿ ವಿದೇಶಾಂಗ ಸಚಿವ SM ಕೃಷ್ಣ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ಇದೀಗ ಕೋಡಿಶ್ರೀಗಳು ಸಹ SM ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಅವರು, ಸರ್ಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಎಸ್.ಎಂ.ಕೃಷ್ಣ ದೂರ ದೃಷ್ಟಿಯೇ ಕಾರಣ. ವರನಟ ಡಾ. ರಾಜಕುಮಾರ್ ಅಪಹರಣ ಆದಾಗ ಎಸ್.ಎಂ.ಕೃಷ್ಣ ನನ್ನನ್ನ ಮನೆಗೆ ಕರೆಸಿದ್ದರು. ಆ ವೇಳೆ ಎಸ್.ಎಂ.ಕೃಷ್ಣ ದಂಪತಿ ಚಿಂತಾಕ್ರಾಂತರಾಗಿದ್ದರು. 107 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದೆ.
ಆದ್ದರಿಂದ ಕೃಷ್ಣರೊಂದಿಗೆ ನಿಕಟ ಹಾಗೂ ಪ್ರೀತಿ ಸಂಪರ್ಕವಿತ್ತು ಎಂದು ಶ್ರೀಗಳು ಅವರ ಜತೆಗಿನ ನೆನಪನ್ನು ಮೆಲುಕು ಹಾಕಿದ್ದಾರೆ. ನಾನು ಬೆಂಗಳೂರಿನಲ್ಲಿ ಓದುವಾಗ ಕಾನೂನು ಕಾಲೇಜಿನಲ್ಲಿ ಎಸ್.ಎಂ.ಕೃಷ್ಣ ಅವರು ಪ್ರಾಧ್ಯಪಕಾರಾಗಿ ಕೆಲಸ ಮಾಡ್ತಿದ್ದರು. ಅದಾದ ಬಳಿಕ ಮೂರು ಬಾರಿ ಮಠಕ್ಕೆ ಭೇಟಿ ನೀಡಿದ್ರು.
ಅವರು ಡಿಸಿಎಂ ಆಗಿದ್ದಾಗ ನೀವು ಸಿಎಂ ಆಗ್ತೀರಾ ಅಂತ ನಾನು ಹೇಳಿದ್ದೆ.ಬಾಂಬೆಯಲ್ಲಿ ಗೌರ್ನರ್ ಆಗಿದ್ದಾಗ ನನ್ನನ್ನ ಕರೆಸಿಕೊಂಡಿದ್ರು. ಎಸ್.ಎಂ.ಕೃಷ್ಣ ಅವರ ಸಾವಿನಿಂದ ಬಹಳಷ್ಟು ನಷ್ಟವಾಗಿದೆ. ಸರ್ಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಎಸ್.ಎಂ.ಕೃಷ್ಣ ದೂರ ದೃಷ್ಟಿಯೇ ಕಾರಣ ಎಂದು ಎಸ್.ಎಂ.ಕೆ ಸಾಧನೆಗಳನ್ನ ಕೋಡಿಮಠದ ಶ್ರೀಗಳು ಮೆಲುವು ಹಾಕಿದ್ದಾರೆ.