ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಸ್ಎಂ ಕೃಷ್ಣ ಅವರು ನನ್ನನ್ನು ಮಗನಂತೆ ಕಾಣುತ್ತಿದ್ದರು. ಅವರ ಮನೆಯ ಮಕ್ಕಳಂತೆ ನನ್ನನ್ನು ಕಂಡಿದ್ದಾರೆ ಎಂದು ಅವರ ಕುರಿತು ಮಾತನಾಡುತ್ತಲೇ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ, ಡಿಸಿಎಂ ಡಿಕೆ ಶಿವಕುಮಾರ್, ನನ್ನ ರಾಜಕಾರಣದ ಮೊದಲ ಗುರು. ಅವರ ಮತ್ತು ನನ್ನ ಒಡನಾಟದ ಇತಿಹಾಸವನ್ನು ಈಗ ನಾನು ಹೇಳುವುದಿಲ್ಲ. ನಾನು ಏನಾದ್ರೂ ತಪ್ಪು ಮಾಡಿದರೆ ಬಹಳ ನೊಂದು ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಬೇರೆಯವರಿಗೂ ನನಗೂ ಬಹಳ ವ್ಯತ್ಯಾಸವಿದೆ. ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.ಇವತ್ತು ಬೆಳಗ್ಗೆ 3 ಗಂಟೆಗೆ ಪುತ್ರಿ ಕರೆ ಮಾಡಿ ವಿಚಾರ ತಿಳಿಸಿದಳು. ನಮ್ಮ ಕುಟುಂಬಕ್ಕೆ ಇದು ದೊಡ್ಡ ಆಘಾತ. ನಾನು ಅವರ ಕುಟಂಬದ ಒಬ್ಬ ಸದಸ್ಯ. ರಾಜಕಾರಣದಲ್ಲಿ ನಾನು ಬೆಳೆದಿದ್ದು, ಅವರು ನನ್ನನ್ನು ಬೆಳೆಸಿದ್ದು ದೊಡ್ಡ ಇತಿಹಾಸವಿದೆ ಎಂದರು.








