ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆನ್ನು ನೋವಿನ ಕಾರಣ ತಿಳಿಸಿ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡ ನಟ ದರ್ಶನವರು ಬೆಂಗಳೂರಿನ ಬಿ ಜಿ ಎಸ್ ಆಸ್ಪತ್ರೆಗೆ ಸರ್ಜರಿ ಮಾಡಿಸಿಕೊಳ್ಳಲು ದಾಖಲಾಗಿದ್ದರು. ಆದರೆ ಆರು ವಾರಗಳ ಕಳೆದರೂ ಕೂಡ ನಟ ದರ್ಶನ್ ಇದುವರೆಗೂ ಸರ್ಜರಿಗೆ ಒಳಗಾಗಿಲ್ಲ. ಇದೀಗ ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಡಿಸೆಂಬರ್ 11 ರಂದು ನಟ ದರ್ಶನ್ ಅವರಿಗೆ ಸರ್ಜರಿ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು.ಈ ವೇಳೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರ ಸುದೀರ್ಘವಾಗಿ ವಾದ ಮಂಡಿಸಿದರು. ಪ್ರಸನ್ನಕುಮಾರ್ ವಾದ ಅಂತ್ಯವಾದ ಬಳಿಕ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದು, ದರ್ಶನ್ ನಡವಳಿಕೆ ಪರಿಗಣಿಸಬೇಕು ಎಂದು ಎಸ್ ಪಿ ಪಿ ವಾದಿಸಿದ್ದಾರೆ. ಸರ್ಜರಿಗಾಗಿ ಮಧ್ಯಂತರ ಜಾಮೀನು ಪಡೆದು ಮಾಡಿಸಿಲ್ಲವೆಂದು ವಾದಿಸಿದ್ದಾರೆ.
ವೈದ್ಯರು 5 ಸರ್ಟಿಫಿಕೇಟ್ಗಳನ್ನು ನೀಡಿದ್ದಾರೆ. ಅಕ್ಟೋಬರ್ 24ರ ಸರ್ಟಿಫಿಕೇಟ್ ಸರ್ಜರಿ ಅಗತ್ಯವೆಂದು ಹೇಳಿದೆ. ಕಾಲು ಮರಗಟ್ಟುತ್ತದೆ ಎಂದು ಹೇಳಿದ್ದಾರೆ.ಬಿಜಿಎಸ್ ವೈದ್ಯರ ಸರ್ಟಿಫಿಕೇಟ್ ನಲ್ಲಿ ಬಳ್ಳಾರಿ ವೈದ್ಯರ ಸರ್ಟಿಫಿಕೇಟ್ ಅನ್ನು ಖಚಿತಪಡಿಸಿದ್ದಾರೆ ಎಂದು ನಟ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದರು.
ದರ್ಶನ್ ಮಧ್ಯಂತರ ಜಾಮೀನಿನ ಯಾವುದೇ ಶರತ್ತು ಉಲ್ಲಂಘಿಸಿಲ್ಲ. ಎಸ್ ಪಿ ಪಿ ಸರ್ಜರಿ ಮಾಡಿಸಿಲ್ಲವೆಂದು ಆರೋಪಿಸಿದ್ದಾರೆ. ನಾನು ವೈದಿಕೀಯ ವರದಿ ಆಧರಿಸಿಯೇ ವಾದ ಮಂಡಿಸಿದ್ದೆ. ನವೆಂಬರ್ 21ರಂದು ವೈದ್ಯರು ಮತ್ತೊಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸರ್ಜರಿಗಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ನವೆಂಬರ್ 6 ರಂದು ಕೆಲ ಚಿಕಿತ್ಸೆಗಳನ್ನು ನೀಡಲಾಗಿದೆ. ಡಿಸೆಂಬರ್ 11ಕ್ಕೆ ಸರ್ಜರಿ ಮಾಡಲಾಗುತ್ತದೆ ಎಂದು ಸಿಬಿ ನಾಗೇಶ್ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.