ಮಂಡ್ಯ : ಇದೆ ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಈ ಒಂದು ಸಮ್ಮೇಳನಕ್ಕೆ ಬರುವ ಎಲ್ಲಾ ಅತಿಥಿಗಳಿಗೆ ಬಾಡೂಟ ಇರಬೇಕು ಎಂದು ಅಗ್ರಹಿಸಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಸಮಾನ ಮನಸ್ಕ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಬೇಯಿಸಿದ ಮೊಟ್ಟೆ ತಿನ್ನುವ ಮೂಲಕ ಧರಣಿ ನಡೆಸಿದ್ದಾರೆ. ನಾಟಿ ಕೋಳಿ ಸಾರು, ಮಟನ್ ಕಬಾಬ್ ನೀಡಬೇಕೆಂದು ಅಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಮಂಡ್ಯ ಅಂದರೆ ಬೆಳೆಯು ಇರಲಿ, ಮೂಳೆಯೂ ಇರಲಿ ನಾವು ಬಾಡೂಟ ನೀಡಿ ಅತಿಥಿ ಸತ್ಕಾರ ಮಾಡಬೇಕು. ಕೋಸಂಬರಿ ಜೊತೆಗೆ ಎಗ್ ಬುರ್ಜಿಯು ಇರಲಿ. ಹಪ್ಪಳ ಜೊತೆಗೆ ಕೊರಬಾಡು, ಕಬಾಬ್ ಇರಲಿ. ಮುದ್ದೆ ಜೊತೆಗೆ ಡ್ಯೂಟಿ ಗೊಜ್ಜು ಇರಲಿ ಎಂದು ಘೋಷಣೆ ಕೂಗಿ ಧರಣಿ ನಡೆಸಿದರು.
ಬಾಡೂಟ ಕೊಡದಿದ್ದರೆ ನಾವೇ ಬಾಡೂಟ ಹಾಕಿಸುತ್ತೇವೆ. ಮನೆ ಮನೆಗೆ ತೆರಳಿ ಕೋಳಿ ಸಂಗ್ರಹಿಸುತ್ತೇವೆ. ಬಸಪ್ಪ ಹಾಗೂ ಜಿಲ್ಲಾಡಳಿತಕ್ಕೆ ಸಮಾನ ಮನಸ್ಕ ವೇದಿಕೆಯವರು ಎಚ್ಚರಿಕೆ ನೀಡಿದ್ದಾರೆ. ಆದರೆ ಪದಾಧಿಕಾರಿಗಳು ಮಾಂಸಹಾರಕ್ಕೆ ಅವಕಾಶ ಇಲ್ಲ ಎಂದು ಕಸಾಪ ಪದಾಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.