ನಂದಿಕೋಟ್ಕೂರು: ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ನಂದ್ಯಾಲ ಜಿಲ್ಲೆಯ ನಂದಿಕೋಟ್ಕೂರಿನ ಬೈರೆಡ್ಡಿ ನಗರದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಪ್ರೀತಿ ನಿರಾಕರಿಸಿದ ಬಾಲಕಿಯನ್ನು ಪ್ರೇಮಿಯೊಬ್ಬ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಲಹರಿ (17) ಮೃತ ಬಾಲಕಿಯಾಗಿದ್ದು, ಬಾಲಕಿ ಮನೆಗೆ ರಾಘವೇಂದ್ರ ಎಂಬ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿ ಮನೆಯಲ್ಲೇ ಸಜೀವ ದಹನವಾಗಿದ್ದಾಳೆ.
ಲಹರಿ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿ ರಾಘವೇಂದ್ರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ರಾಘವೇಂದ್ರ ಕೋಲಿಮಿಗುಂಡ್ಲ ನಿವಾಸಿ ಎನ್ನಲಾಗಿದೆ. ಲಹರಿ ಮಲಗಿದ್ದ ವೇಳೆ ಲಹರಿ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಲಹರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ನಂದಿ ಕೊಟ್ಕೂರು ಬೈರೆಡ್ಡಿ ನಗರದಲ್ಲಿ ದುಃಖದ ಛಾಯೆ ಆವರಿಸಿದೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








