ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು ನಿಯಂತ್ರಣ ಕಳೆದುಕೊಂಡ ಬಿ ಆರ್ ಟಿ ಸಿ ಬಸ್ ಒಂದು, ರಸ್ತೆ ಬಿಟ್ಟು ನೇರವಾಗಿ ಬಾರ್ ಗೆ ನುಗ್ಗಿದೆ ಈ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿಯಲ್ಲಿ ನೇರವಾಗಿ BRTC ಬಸ್ ಒಂದು ಬಾರ್ ಗೆ ನುಗ್ಗಿದೆ. ಹುಬ್ಬಳ್ಳಿಯ ಬೈರೀದೇವರಕೊಪ್ಪ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಏಕಾಏಕಿ ಚಿಗರಿ ಬಸ್ ಬಾರಿಗೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಅವರನ್ನು ಬಸ್ಸಿಂದ ಕೆಳಗೆ ಇಳಿಸಿ ಅಲ್ಲಿಯೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.