ಕಲಬುರ್ಗಿ : ಸದ್ಯ ಬಳ್ಳಾರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಬದಲು ನಾಯಿಗಳು ತಮ್ಮದೇ ದರ್ಬಾರ್ ನಡೆಸುತ್ತಿವೆ. ಹೌದು ಈ ಒಂದು ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾವ್ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ಬೆಡ್ಗಳ ಮೇಲೆ ನಾಯಿಗಳದ್ದೇ ದರ್ಬಾರ್ ಎನ್ನಲಾಗುತ್ತಿದೆ. ನಾಯಿಗಳು ಬಂದು ಮಲಗಿದರು ಸಹ ಯಾರು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.ಸರ್ಕಾರಿ ಆಸ್ಪತ್ರೆಗಳು ಈಗ ನಾಯಿಗಳ ಅಡ್ಡೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ಡೊಂಗರಾವ್ನಲ್ಲಿ ಇರುವ ಆಸ್ಪತ್ರೆಯಲ್ಲಿ ಈ ಒಂದು ಘಟನೆ ಕಂಡು ಬಂದಿದೆ. ಕಮಲಾಪುರ ತಾಲೂಕಿನ ಡೊಂಗರಗಾವ್ ಗ್ರಾಮದಲ್ಲಿ ಈ ಕುರಿತು ಜನ ದೂರು ಕೊಟ್ಟರು ಕೂಡ ಡಿ ಎಚ್ ಓ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದ್ದಾರೆ. ಡಿಎಚ್ಒನಲ್ ನಿರ್ಲಕ್ಷಕ್ಕೆ ಇದೀಗ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ರೋಗ ವಾಸಿ ಮಾಡಿಕೊಳ್ಳಲು ಎಂದು ಆಸ್ಪತ್ರೆಗೆ ಬರುತ್ತವೆ. ಆದರೆ ಇಲ್ಲಿ ಬಂದು ನೋಡಿದರೆ ನಾಯಿಗಳು ಬೆಡ್ ಮೇಲೆ ಮಲಗಿವೆ. ಇದರಿಂದ ರೋಗವಾಸಿಯಾಗುವ ಬದಲು ಮತ್ತಷ್ಟು ರೋಗ ಅಂಟಿಸಿಕೊಂಡು ಹೋಗುವ ಪರಿಸ್ಥಿತಿ ನಮ್ಮದಾಗಿದೆ ಎಂದು ಆಸ್ಪತ್ರೆಗೆ ಭೇಟಿ ನೀಡುವ ಕೆಲವು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.