ಬೆಂಗಳೂರು : ಬೆಂಗಳೂರಿನ ಬಿಎಂಟಿಸಿ ನೌಕರರಿಗೆ ಸಂಸ್ಥೆಯು ಇದೀಗ ಸಿಹಿ ಸುದ್ದಿ ಒಂದು ನೀಡಿದ್ದು, ಈ ವರ್ಷದ ಫೆಬ್ರವರಿ-2024 ರ ತಿಂಗಳಿನಿಂದ 3.75% ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ನವೆಂಬರ್ ತಿಂಗಳಿನವರೆಗೆ ವೇತನದೊಂದಿಗೆ ಪಾವತಿ ಮಾಡಲಾಗುತ್ತೆ ಎಂದು ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಸ್ಥೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಫೆಬ್ರವರಿ-2024 ರ ಮಾಹೆಯ 3.75% ತುಟ್ಟಿ ಭತ್ಯೆ ಹಿಂಬಾಕಿ ಮೊತ್ತವನ್ನು ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗಳಿಗೆ ನವೆಂಬರ್-2024 ನೇ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿ ಮಾಡಲಾಗಿರುತ್ತದೆ. ಸದರಿ ಅವಧಿಯಲ್ಲಿ ನಿವೃತ್ತಿಗೊಂಡಿರುವ ಅರ್ಹ ನೌಕರರಿಗೂ ಸಹಾ ತುಟ್ಟಿ ಭತ್ಯೆ ಹಿಂಬಾಕಿಯನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ.