ಬೆಂಗಳೂರು : ಕೊರಿಯರ್ ಮುಖಾಂತರ ರಾಜ್ಯದ ವಿವಿಧ ಭಾಗಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ವಿವಿಧ ಕೊರಿಯರ್ ಏಜೆನ್ಸಿಗಳ ಮೇಲೆ ಸಿಸಿ ಬೇಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಇಂದು ಬೆಂಗಳೂರಿನ ಕೊರಿಯರ್ ಏಜೆನ್ಸಿ ಗಳ ಮೇಲೆ ಸಿಸಿಬಿ ದಾಳಿ ಮಾಡಿದೆ. ಕೊರಿಯರ್ ಮೂಲಕ ಮಾದಕ ವಸ್ತುಗಳನ್ನು ಸಾಕಾಟ ಮಾಡಲಾಗುತ್ತಿದೆ. ಬೆಂಗಳೂರು ಸಿಸಿಬಿ ಪೊಲೀಸ್ ರಿಂದ ಸ್ಪೆಷಲ್ ಡ್ರೈವ್ ಮೂಲಕ ತನಿಖೆ ಮಾಡುತ್ತಿದ್ದು, ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೊರಿಯರ್ ಏಜೆನ್ಸಿಯಲ್ಲಿ ಡಾಗ್ ಸ್ಕ್ವಾರ್ ನಿಂದ ತನಿಖೆ ನಡೆಸುತ್ತಿದ್ದಾರೆ.ಡ್ರಗ್ಸ್ ಮಾರಾಟಕ್ಕೆ ಬ್ರೇಕ್ ಹಾಕಲು ಸಿಸಿಬಿ ಮುಂದಾಗಿದೆ. ಇತ್ತೀಚಿಗೆ ಕೊರಿಯರ್ ಮುಖಾಂತರ ಹಾಗೂ ಪೋಸ್ಟ್ ಗಳ ಮುಖಾಂತರ ಡ್ರಗ್ಸ್ ಬೆಂಗಳೂರಿಗೆ ಬರುತ್ತಿತ್ತು.ಅಲ್ಲದೆ ಈಗಾಗಲೇ ಸಿಸಿಬಿ ಪೊಲೀಸರು ಹಲವು ಕಾರ್ಯಾಚರಣೆ ಮಾಡಿ ಡ್ರಗ್ ಪೇಡ್ಲರ್ ಗಳನ್ನು ಕೂಡ ಅರೆಸ್ಟ್ ಮಾಡಿದ್ದಾರೆ.