ಕಲ್ಬುರ್ಗಿ : ಕಲ್ಬುರ್ಗಿ ಸೆಂಟ್ರಲ್ ಜೈಲಿನಲ್ಲಿ ಮತ್ತಷ್ಟು ಕರ್ಮಕಾಂಡದ ವಿಡಿಯೋಗಳು ಈಗ ಬಯಲಾಗಿದೆ. ಕೈದಿಗಳು, ಎಣ್ಣೆ ಹೊಡೆಯುತ್ತಾ ಸಿಗರೇಟ್ ಸೇದುತ್ತ ಎಂಜಾಯ್ ಮಾಡುತ್ತಿದ್ದು, ಹಾಗೂ ಗುಟ್ಕಾ ಗಳ ರಾಶಿ ರಾಶಿ ವಿಡಿಯೋ ಇದೀಗ ವೈರಲ್ ಆಗಿದೆ. ಹಿರೇವಿಚಾರವಾಗಿ ಜೈಲಿನ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ನನ್ನ ವಿರುದ್ಧ ಷಡ್ಯಂತರ ಮಾಡಿರೋದು ಪಕ್ಕಾ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೆಲ್ಲವೂ ಪಕ್ಕಾ ಪ್ಲಾನ್ ಮಾಡಿಯೇ ಮಾಡುತ್ತಿದ್ದಾರೆ. ಅಕ್ಟೋಬರ್ 14ರಂದು ನಾನು ಜೈಲಿನ ಅಧೀಕ್ಷಕಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮರುದಿನ ಅಂದರೆ ಅಕ್ಟೊಬರ್ 15, 16 ಮತ್ತು 17ರಂದು ನಮ್ಮ ಹಿರಿಯ ಅಧಿಕಾರಿಗಳೇ ಜೈಲಿಗೆ ತನಿಖೆ ನಡೆಸಲು ಬಂದಿದ್ದರು. ಅಲ್ಲಿಯವರೆಗೂ ನಾನು ಯಾರನ್ನು ಭೇಟಿಯಾಗಿಲ್ಲ.
ವೈರಲ್ ಆದಂತಹ ವಿಡಿಯೋದಲ್ಲಿ ಅಕ್ಟೋಬರ್ 15 ರ ದಿನಾಂಕ ಇದೆ. ಅಂದರೆ ಇವರು ನನ್ನ ವಿರುದ್ಧ ಷಡ್ಯಂತರ ಮಾಡುತ್ತಿರುವುದು ಪಕ್ಕಾ ಆಗಿದೆ. ಆದಷ್ಟು ಬೇಗ ಎಲ್ಲವನ್ನೂ ವಿವರಿಸುತ್ತೇನೆ. ಇದರ ಹಿಂದಿನ ಷಡ್ಯಂತ್ರವೇನು ಅನ್ನೋದನ್ನ ಶೀಘ್ರವೇ ಹೇಳುತ್ತೇನೆ ಎಂದು ಜೈಲಿನಲ್ಲಿ ಮುಖ್ಯ ಅಧಿಕ್ಷಕಿ ಡಾ. ಅನಿತಾ ತಿಳಿಸಿದರು.