ರಾಯಚೂರು : ಎರಡು ಬಣಗಳ ಬಡಿದಾಟ ನಡೆಯುತ್ತಿದ್ದರು, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಇಡಪನೂರು ಠಾಣೆಯ ಪಿಎಸ್ಐ ಅವಿನಾಶ್ ಕಾಂಬ್ಳೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಸೆಪ್ಟೆಂಬರ್ 6 ರಂದು ಎರಡು ಬಣಗಳ ನಡುವೆ ಗಲಾಟೆ ನಡೆದಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಮಿರ್ಜಾಪುರ ಗ್ರಾಮದಲ್ಲಿ ಎರಡು ಬನಗಳ ನಡುವೆ ಗಲಾಟೆ ನಡೆದಿತ್ತು. ಈ ಒಂದು ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು 6 ಜನರು ಗಾಯಗೊಂಡಿದ್ದರು. ಗಲಾಟೆಯ ವೇಳೆ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದರು.
ಆದರೂ ಪಿಎಸ್ಐ ಅವಿನಾಶ್ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.ಪಿಎಸ್ಐ ಅವಿನಾಶ್ ಕಾಂಬಳೆ ನಿರ್ಲಕ್ಷ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಇಡಪನೂರು ಠಾಣೆಯ ಪಿಎಸ್ಐ ಅವಿನಾಶ್ ಕಾಂಬಳೆ ಸಸ್ಪೆಂಡ್ ಆಗಿದ್ದಾರೆ. ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.