ರಾಯಚೂರು : ನಾವೆಲ್ಲರೂ ರಾಜಾಹುಲಿ ಸಿನಿಮಾ ವನ್ನು ನೋಡಿದ್ದೇವೆ. ಅದರಲ್ಲಿ ನಟ ಯಶ್ ಅವರು ಹಾಗೂ ಆತನ ಬಾಲ್ಯ ಸ್ನೇಹಿತ ಒಂದೇ ಹುಡುಗಿಯನ್ನು ಪ್ರೀತಿಸುತ್ತಿರುತ್ತಾರೆ. ಆದರೆ ಆಕೆಯು ನಟ ಯಶ್ ಅವರನ್ನ ಪ್ರೀತಿಸುತ್ತಿದ್ದಳು. ಹೀಗಾಗಿ ಈ ಒಂದು ಹುಡುಗಿಯ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ಆಗಿ ಹೊಡೆದಾಡಿಕೊಳ್ಳುತ್ತಾರೆ.
ಆದರೆ ಇಂಥದ್ದೇ ಸ್ಟೈಲ್ ನಲ್ಲಿ ರಾಯಚೂರಿನಲ್ಲಿ ಒಂದು ಘಟನೆ ನಡೆದಿದ್ದು, ಒಂದೇ ಹುಡುಗಿಯನ್ನು ಇಬ್ಬರು ಬಾಲ್ಯ ಸ್ನೇಹಿತರು ಪ್ರೀತಿಸುತ್ತಿದ್ದರು. ಈ ವೇಳೆ ಇದೆ ವಿಚಾರವಾಗಿ ಸ್ನೇಹಿತ ತನ್ನ ಇನ್ನೊಬ್ಬ ಬಾಲ್ಯ ಸ್ನೇಹಿತನನ್ನು ಮಾತುಕತೆಗೆ ಕರೆಸುತ್ತಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಒಬ್ಬ ಸ್ನೇಹಿತ ತನ್ನ ಸಹಚರರೊಂದಿಗೆ ಸೇರಿ ಬಾಲ್ಯ ಸ್ನೇಹಿತನನ್ನೇ ಕೊಲ್ಲುತ್ತಾನೆ.ಮೃತನನ್ನು ಸಮೀರ್ ಎಂದು ಗುರುತಿಸಲಾಗಿದೆ.ನವೆಂಬರ್ 26ರಂದು ಈ ಒಂದು ಘಟನೆ ನಡೆದಿದ್ದು, ಇದೀಗ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ. ಒಬ್ಬಳೇ ಹುಡುಗಿಯನ್ನು ಇಬ್ಬರು ಪ್ರಾಣ ಸ್ನೇಹಿತರು ಪ್ರೀತಿಸುತ್ತಿದ್ದರು. ಬಾಲ್ಯ ಸ್ನೇಹಿತರಾಗಿದ ಮೃತ ಸಮೀರ್ ಮತ್ತು A1 ಆರೋಪಿ ರಮೇಶ್. ನವೆಂಬರ್ 26ರ ಸಂಜೆ ಸಮೀರ್ ನನ್ನು ರಮೇಶ್ ಮಾತುಕತೆಗೆ ಕರೆಸಿದ್ದ ಎನ್ನಲಾಗಿದೆ. ಈ ವೇಳೆ ಸಮೀರ್ ನನ್ನು A1 ರಮೇಶ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಕೊಂದಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.