ಹಾಸನ : ಕಾಂಗ್ರೆಸ್ ಪಕ್ಷವು ಇಂದು ಹಾಸನದಲ್ಲಿ ಜನಕಲ್ಯಾಣ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಒಂದು ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಈ ಬಂಡೆ ಯಾವಾಗಲೂ ಸಿಎಂ ಸಿದ್ದರಾಮಯ್ಯ ಅವರ ಜೊತೆಲೆ ಇರುತ್ತದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಜನರಿಗೆ ಭರವಸೆ ನೀಡಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನೊಂದ ತಾಯಂದಿರಿಗೆ ಆಶ್ರಯ ಕೊಡಲು ಶ್ರೇಯಸ್ ಅವರನ್ನು ಆಯ್ಕೆ ಮಾಡಿದ್ದೀರಿ. 2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಎಂದರು.
ರಾಮನಗರ ಜಿಲ್ಲೆಯಲ್ಲಿ 4 ಕ್ಷೇತ್ರಗಳ ಪೈಕಿ ನಾಲ್ಕರಲ್ಲೂ ನಾವು ಗೆದ್ದಿದ್ದೇವೆ. ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಂಗಳೂರಲ್ಲಿ ಗೆದ್ದಿದ್ದೇವೆ. ಮುಂದೆ ಹಾಸನ ಜಿಲ್ಲೆಯಲ್ಲೂ ನಾವೇ ಗೆಲ್ಲುತ್ತೇವೆ. ಹಾಗಾಗಿ ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಹಾಸನದ ಜನಕಲ್ಯಾಣ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ತಲೆಕೆಡಿಸಿಕೊಳ್ಳಬೇಡಿ ಈ ಬಂಡೆ ಡಿಕೆ ಸಿದ್ದರಾಮಯ್ಯ ಜೊತೆ ಇದೆ ಈಗಲೂ ಇರುತ್ತೇನೆ, ನಾಳೆನೂ ಇರುತ್ತೇನೆ, ಸಾಯುವವರೆಗೂ ಅವರ ಜೊತೆಗೆ ಇರುತ್ತೇನೆ. ಈ ಮಾತನ್ನು ಮೈಸೂರಲ್ಲಿ ಈ ಹಿಂದೆ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಹಾಗಾಗಿ ತಲೆಕೆಡಿಸಿಕೊಳ್ಳಬೇಡಿ ನಮ್ಮ ಜೊತೆಯಾಗಿ ಇರುತ್ತೇವೆ ಎಂದು ಜನಕಲ್ಯಾಣ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಈಗ ಅಧಿಕಾರಕ್ಕೆ ಬಂದು 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ದೇವೇಗೌಡರು ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಣ್ಣೀರು ಹಾಕಿದರು. ಹಾಸನದ ಮಾಜಿ ಸಂಸದರ ಸಾಕ್ಷಿ ಗುಡ್ಡೆಯನ್ನು ನಾವು ಕೇಳುವುದಿಲ್ಲ ಆದರೆ ಹಾಸನದಲ್ಲಿ ನೀವು ಮಾಡಿರುವ ಸಾಕ್ಷಿಯ ಗುಡ್ಡೆ ಏನು ನಾವು ಭಾವನೆ ಧರ್ಮದ ಮೇಲೆ ರಾಜಕಾರಣವನ್ನು ಮಾಡಲ್ಲ ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಇದು ಗ್ಯಾರಂಟಿಗಳ ಗೆಲುವಿನ ನಂಬಿಕೆಯ ಸಮಾವೇಶ ಎಂದು ತಿಳಿಸಿದರು.