ದಾವಣಗೆರೆ : ಪ್ರಕರಣ ಒಂದರಲ್ಲಿ ಆರೋಪಿಗಳ ಹೆಸರನ್ನು ಕೈ ಬಿಡಲು ASI ಈರಣ್ಣ ಎನ್ನುವವರು ವ್ಯಕ್ತಿ ಒಬ್ಬರ ಬಳಿ 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಗಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಸರಸ್ವತಿ ನಗರದ ಮಣಿಕಂಠ ಆಚಾರ್ಯನಿಂದ ಎಎಸ್ಐ ಅಧಿಕಾರಿ ಲಂಚ ಪಡೆಯುತ್ತಿದ್ದ. ಮಣಿಕಂಠ ತಾಯಿ ಮತ್ತು ಪತಿ ನಡುವೆ ಜಗಳವಾಗಿ ಎಫ್ಐಆರ್ ದಾಖಲಾಗಿತ್ತು. ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಕೈಬಿಡಲು 1 ಲಕ್ಷ ರೂಪಾಯಿಗೆ ಕೆಟಿಜಿ ನಗರ ಠಾಣೆಯ ಎಎಸ್ಐ ಈರಣ್ಣ ಬೇಡಿಕೆ ಇಟ್ಟಿದ್ದ.
ಈ ವೇಳೆ ಮುಂಗಡವಾಗಿ ಠಾಣೆ ಬಳಿ ರಂಜಸ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಎಂ. ಎಸ್ ಕೌಲಾಪುರೆ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ. ಸದ್ಯ ಎಎಸ್ಐ ಈರಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ.