ಮಹಾರಾಷ್ಟ : ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿ ಕೂಟದ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಆದರೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಈ ಒಂದು ಗ್ರಾಮದಲ್ಲಿ ಗ್ರಾಮಸ್ಥರು ಇವಿಎಂ ಮಷೀನ್‌ಗಳ ಮೇಲೆ ಅಪನಂಬಿಕೆ ಹೊಂದಿದ್ದು ಇಂದು ಅವರು ಬ್ಯಾಲೆಟ್ ಪೇಪರ್ ಮತದಾನ ಮಾಡುವ ಮೂಲಕ ಅಣುಕು ಮತದಾನ ನಡೆಸಿದ್ದಾರೆ.
ಹೌದು ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಬ್ಯಾಲೆಟ್ ಪೇಪರ್ ಮತದಾನ ನಡೆದಿದ್ದು, ಸೊಲ್ಲಾಪುರ ಜಿಲ್ಲೆಯ ಮರ್ಕಡ್ವಾಡಿಯಲ್ಲಿ ಅಧಿಕೃತ ಮತದಾನ ಪ್ರಕ್ರಿಯೆ ನಡೆದಿದೆ. ಇವಿಎಂ ಮಷಿನ್ ಮೇಲೆ ನಂಬಿಕೆ ಇಲ್ಲದೆ ಬ್ಯಾಲೆಟ್ ಪೇಪರ್ ಮತದಾನ ನಡೆಸಲಾಗಿದೆ. ಮರ್ಕಡ್ವಾಡಿ ಗ್ರಾಮದವರೇ ಈ ಒಂದು ಅಣುಕು ಮತದಾನ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮರ್ಕಡ್ವಾಡಿ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಸಿತ್ತು. ಹಾಗಾಗಿ ಇವಿಎಂ ಮೇಲೆ ಮರ್ಕಡ್ವಾಡಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಬ್ಯಾಲೆಟ್ ಪೇಪರ್ ಮೂಲಕ ಇದೀಗ ಗ್ರಾಮದಲ್ಲಿ ಅಣುಕು ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣಾ ಆಯೋಗಕ್ಕೆ ಸೆಡ್ಡು ಹೊಡೆದು ಅಣುಕು ಮತದಾನ ಮಾಡಲಾಗಿದೆ. ಮತಯಂತ್ರಗಳ ಮೇಲೆ ಅಪನಂಬಿಕೆ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ಮತದಾನ ನಡೆಯುತ್ತಿದೆ.