ದಕ್ಷಿಣಕನ್ನಡ : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಅಬ್ಬರ ಕರ್ನಾಟಕದ ಮೇಲು ಭಾರಿ ಪರಿಣಾಮ ಬೀರಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಆಗಿದ್ದ ಪರಿಣಾಮ, ಜಿಲ್ಲೆಯ ಬಜಪೆ ಸಮೀಪ ಭೂಕುಸಿತ ಉಂಟಾಗಿದೆ.
ಹೌದು ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಬಜಪೆ ಸಮೀಪದ ಆದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಭೂಕಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಆದ್ಯಪಾಡಿಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಕೆಲ ಭಾಗದ ಆದ್ಯಪಾಡಿ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ.ಉಮಾನಾಥ ಸಾಲಿಯಾನ್ ಎಂಬುವವರಿಗೆ ಸೇರಿದ ಮನೆಗೂ ಹಾನಿ ಉಂಟಾಗಿದ್ದು, ಮನೆ ಮುಂಭಾಗದ ಅಂಗಳದಲ್ಲಿ ಮಣ್ಣು ಕೆಸರು ಸಂಪೂರ್ಣವಾಗಿ ತುಂಬಿಕೊಂಡಿದೆ.