ಬೆಂಗಳೂರು : ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ FIR ದಾಖಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿ ಎಂದು ಪೊಲೀಸರು ಎರಡು ದಿನಗಳ ಹಿಂದೆ ನೋಟಿಸ್ ನೀಡಿದ್ದರು. ಈ ವಿಚಾರವಾಗಿ ಚಂದ್ರಶೇಖರನಾಥ ಸ್ವಾಮೀಜಿಯವರು ನಾನು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹುಷಾರಿಲ್ಲ ಎಲ್ಲಿಗೂ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ನಾನು ಇಂದು ವಿಚಾರಣೆಗೆ ಹಾಜರಾಗುವುದಿಲ್ಲ. ಮಠದವರೆಗೂ ಬಂದು ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರು ಮಠಕ್ಕೆ ಬಂದರೆ ಹೇಳಿಕೆ ಕೊಡುತ್ತೇನೆ ಎಂದು ಅವರು ತಿಳಿಸಿದರು. ಎಂತೆಂತಹ ವಿಷಯಗಳಲ್ಲಿ ಏನು ಮಾಡಲ್ಲ. ಆದರೆ ನನ್ನ ವಿಚಾರಕ್ಕೆ ಕೇಸ್ ಹಾಕಿದ್ದಾರೆ ಎಂದು ಪೊಲೀಸ್ ಇಲಾಖೆಯ ವಿರುದ್ಧ ಚಂದ್ರಶೇಖರನಾಥ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ಎಚ್ ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ವಿಧಾನಸೌಧದಲ್ಲಿ ಪಾರ್ಕ್ ಜಿಂದಾಬಾದ್ ಎಂದವರನ್ನು ಏನು ಮಾಡಿಲ್ಲ. ನಾನು ಕ್ಷಮೆ ಕೇಳಿದರೂ ಕೂಡ ಈ ರೀತಿ ಕೆಎಸ್ ದಾಖಲಿಸಿದ್ದಾರೆ. ಈ ವಯಸ್ಸಿನಲ್ಲಿ ನನಗೆ ಕೇಸ್ ವಿಚಾರಣೆ ಅಂತಿದ್ದಾರೆ. ಇಲ್ಲಿ ಬಂದರೆ ಉತ್ತರ ಕೊಡುತ್ತೇನೆ ಎಂದು ಕೆಂಗೇರಿಯ ಮಠದಲ್ಲಿ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದರು.