ಬೆಂಗಳೂರು : ಬೆಂಗಳೂರಿನ ಜನತೆಗೆ BMRCL ಸಿಹಿ ಸುದ್ದಿಯೊಂದನ್ನು ನೀಡಿದ್ದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನು ಮುಂದೆ 5G ಇಂಟರ್ನೆಟ್ ಸಿಗಲಿದೆ. ಮೆಟ್ರೋ ಪ್ರಯಾಣದ ವೇಳೆ ಸಾರ್ವಜನಿಕರಿಗೆ 5ಜಿ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಒದಗಿಸುವುದು ಹಾಗೂ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ನಮ್ಮ ಮೆಟ್ರೋ’ ಪಿಲ್ಲರ್ ಗಳಲ್ಲಿ ನೆಟ್ವರ್ಕ್ ಸೆಲ್ ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.
ಹೌದು ಮೆಟ್ರೋ ಸಂಚಾರದ ವೇಳೆ ಪ್ರಯಾಣಿಕರಿಗೆ ಕೆಲವೆಡೆ ಕಚೇರಿ ಕೆಲಸ ಮಾಡಲು. ಮಾತನಾಡಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಪರಿಹರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಜತೆಗೆ ನೆಟ್‌ವರ್ಕ್ ಸಲ್ ಗಳ ಅಳವಡಿಕೆ ಮೂಲಕವೂ ಟೆಲಿಕಾಂ ಕಂಪನಿಗಳಿಂದ ಬಾಡಿಗೆ ಪಡೆದು ಆದಾಯ ಗಳಿಸಿಕೊಳ್ಳಲು ಮುಂದಾಗಿದೆ.
ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಚಲ್ಲಘಟ್ಟ ಟರ್ಮಿನಲ್‌ವರೆಗೆ (43.49ಕಿ.ಮೀ.) ಹಾಗೂ ಉತ್ತರ-ದಕ್ಷಿಣಕಾರಿಡಾರ್ ಮಾದಾವರದಲ್ಲಿಪ್ರಾ ರಂಭವಾಗಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ (33.5 ಕಿ.ಮೀ.) ಮತ್ತು ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಆರ್.ವಿ.ರಸ್ತೆ – ಬೊಮ್ಮನಹಳ್ಳಿ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಪಿಲ್ಲರ್ ಗಳಲ್ಲಿ ನೆಟ್ವರ್ಕ್ ಸೆಲ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.
ಈ ಮಾರ್ಗದಲ್ಲಿ ಎತ್ತರಿಸಿದ ಮಾರ್ಗದಲ್ಲಿ ಮಾರ್ಗಜಿ ಸ್ಟಾಲ್ ಸೆಲ್‌ಗಳ ಉಪಕರಣಗಳನ್ನು ಅಳವಡಿಸುವಂತೆ ಟೆಲಿಕಾಂ ಕಂಪನಿಗಳನ್ನು ಬಿಎಂಆರ್‌ಸಿಎಲ್ ಆಹ್ವಾನಿಸಿದೆ. ಈ ಸೆಲ್‌ಗಳು ಮೆಟ್ರೋ ಕಾರಿಡಾರ್ ಹಾಗೂ ಸುತ್ತಮುತ್ತ ಸೀಮಿತ ಪ್ರದೇಶದಲ್ಲಿ ನೆಟ್ವರ್ಕ್ ಅನ್ನು ಪೂರೈಸಲಿದೆ. ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರವು 2022ರಲ್ಲಿ ಭಾರತದಲ್ಲಿ ಮೊಟ್ಟಮೊದಲು ನಮ್ಮ ಮೆಟ್ರೋದಲ್ಲಿ ಪ್ರಾಯೋಗಿಕವಾಗಿ ಜಿ ನೆಟ್ವರ್ಕ್ ಅನ್ನು ಅಳವಡಿಸಿ ಪರೀಕ್ಷಿಸಿತ್ತು.
ಇದು 200 ಮೀಟರ್ ವ್ಯಾಪ್ತಿಯ ಸಿಗ್ನಲ್ ಸಾಮರ್ಥ ಹೊಂದಿತ್ತು. ಡೌನ್‌ಲೋಡ್ 1.45 ಜೆಬಿಪಿಎಸ್ ವೇಗಹಾಗೂ ಅಪ್ ಲೋಡ್ 45 ಎಂಬಿಪಿಎಸ್ ವೇಗದಲ್ಲಿ ಇದು ಕಾರ್ಯಾಚರಣೆ ಆಗಿತ್ತು. 4ಜಿ ನೆಟ್ವಕ್ ೯ಗಿಂತ ಸಾಕಷ್ಟು ವೇಗದ ಸಾಮರ್ಥವನ್ನು ಹೊಂದಿತ್ತು.ಪ್ರಸ್ತುತ ಟೆಲಿಕಾಂ ಕಂಪನಿಗಳು ಮೆಟ್ರೋ ಪಿಲ್ಲರ್‌ಗಳ ಸರ್ವೆ ನಡೆಸಿ 5ಜಿ ಸೆಲ್ಗಳನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಕೆ ಮಾಡಬಹುದು. ಇದರಿಂದ ಮೆಟ್ರೋಗೂ ಬಾಡಿಗೆ ಆದಾಯ ಬರಲಿದೆ. ಕಂಪನಿಗಳಿಗೂ ಹೆಚ್ಚು ಗ್ರಾಹಕರು ಲಭ್ಯರಾಗಲಿದ್ದಾರೆ. ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.