ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಿಂದ ( Karnataka High Court ) ಸಾರ್ವತ್ರಿಕ ಹಾಗೂ ನಿರ್ಬಂಧಿತ ರಜಾ ದಿನಗಳನ್ನು ( General holiday and restricted holiday ) ಒಳಗೊಂಡಂತ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಮುದ್ರಣಾಲಯದಿಂದ ಕರ್ನಾಟಕ ಹೈಕೋರ್ಟ್ ರಜಾ ದಿನಗಳನ್ನು ಒಳಗೊಂಡಂತ 2025ನೇ ಸಾಲಿನ ಕ್ಯಾಲೆಂಟರ್ ಪ್ರಕಟಿಸಿದೆ. ಅದರಲ್ಲಿ ಸಾರ್ವತ್ರಿಕ ರಜೆ, ಪರಿಮಿತ ರಜೆ ಹಾಗೂ ಬೇಸಿಗೆ, ದಸರಾ, ಚಳಿಗಾಲದ ಅವಧಿಯ ರಜಾ ದಿನಗಳ ಪಟ್ಟಿಯನ್ನು ಒಳಗೊಂಡಿದೆ.
ಬೆಂಗಳೂರು ಪ್ರೆಸ್ ನಿಂದ ಬಿಡುಗಡೆಯಾಗಿರುವಂತ ಕರ್ನಾಟಕ ಹೈಕೋರ್ಟ್ 2025ನೇ ಸಾಲಿನ ಕ್ಯಾಲೆಂಟರ್ ನಲ್ಲಿ 19 ಸಾರ್ವತ್ರಿಕ ರಜೆಗಳನ್ನು ಒಳಗೊಂಡಿದೆ. ಅಲ್ಲದೇ 20 ಪರಿಮಿತ ರಜೆಗಳಿವೆ. ಇದಲ್ಲದೇ ಬೇಸಿಗೆ ರಜೆ ಮೇ.5, 2025ರಿಂದ ಆರಂಭಗೊಂಡು, ಮೇ 31, 2025ರವರೆಗೆ ಇರಲಿದೆ. ದಸರಾ ರಜೆ ಸೆಪ್ಟೆಂಬರ್ 29, 2025ರಿಂದ ಅಕ್ಟೋಬರ್ 6, 2025ರವರೆಗೆ ಇರಲಿದೆ. ಚಳಿಗಾಲದ ರಜಾ ದಿನವು ಡಿಸೆಂಬರ್ 20, 2025ರಿಂದ ಡಿಸೆಂಬರ್ 31, 2025ರವರೆಗೆ ಇರುವುದಾಗಿ ನಮೂದಿಸಲಾಗಿದೆ.
ಹೀಗಿದೆ 2025ನೇ ಸಾಲಿನಲ್ಲಿ ಕರ್ನಾಟಕ ಹೈಕೋರ್ಟ್ ನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ( General holiday List )
- ದಿನಾಂಕ 14-01-2025ರಂದು ಉತ್ತರಾಯಣ ಪುಣ್ಯಕಾಲ, ಸಂಕ್ರಾಂತಿ ಹಬ್ಬ
- ದಿನಾಂಕ 26-02-2025 ಮಹಾ ಶಿವರಾತ್ರಿ
- ದಿನಾಂಕ 31-03-2025 ಕುತುಬ್ ಇ ರಂಜಾನ್
- ದಿನಾಂಕ 10-04-2025 ಮಹಾವೀರ ಜಯಂತಿ
- ದಿನಾಂಕ 14-04-2025 ಡಾ.ಬಿಆರ್ ಅಂಬೇಡ್ಕರ್ ಜಯಂತಿ
- ದಿನಾಂಕ 18-04-2025 ಗುಡ್ ಪ್ರೈಡೇ
- ದಿನಾಂಕ 30-04-2025 ಬಸವ ಜಯಂತಿ, ಅಕ್ಷಯ ತೃತೀಯ
- ದಿನಾಂಕ 01-05-2025 ಮೇ ಡೇ
- ದಿನಾಂಕ 07-06-2025 ಬಕ್ರಿದ್
- ದಿನಾಂಕ 15-08-2025 ಸ್ವಾತಂತ್ರ್ಯ ದಿನಾಚರಣೆ
- ದಿನಾಂಕ 27-08-2025 ವರಸಿದ್ಧಿ ವಿನಾಯಕ ಚತುರ್ಥಿ
- ದಿನಾಂಕ 05-09-2025 ಈದ್ ಮಿಲಾದ್
- ದಿನಾಂಕ 01-10-2025 ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
- ದಿನಾಂಕ 02-10-2025 ಮಹಾತ್ಮಗಾಂಧಿ ಜಯಂತಿ
- ದಿನಾಂಕ 07-10-2025 ಮಹರ್ಷಿ ವಾಲ್ಮೀಕಿ ಜಯಂತಿ
- ದಿನಾಂಕ 20-10-2025 ನರಕ ಚತುರ್ಥಿ
- ದಿನಾಂಕ 22-10-2025 ಬಲಿ ಪಾಡ್ಯಮಿ, ದೀಪಾವಳಿ
- ದಿನಾಂಕ 01-11-2025 ಕನ್ನಡ ರಾಜ್ಯೋತ್ಸವ
- ದಿನಾಂಕ 25-12-2025 ಕ್ರಿಸ್ ಮಸ್
ಹೀಗಿದೆ 2025ನೇ ಸಾಲಿನ ಕರ್ನಾಟಕ ಹೈಕೋರ್ಟ್ ನಿರ್ಬಂಧಿತ ರಜಾದಿನಗಳ ಪಟ್ಟಿ ( Restricted holiday List )
- ದಿನಾಂಕ 01-01-2025 ಹೊಸ ವರ್ಷ
- ದಿನಾಂಕ 06-02-2025 ಶ್ರೀ ಮಧ್ವನವಮಿ
- ದಿನಾಂಕ 14-02-2025 ಸಬ್ ಇ ಬರತ್
- ದಿನಾಂಕ 13-03-2025 ಹೋಳಿ ಹಬ್ಬ
- ದಿನಾಂಕ 27-03-2025 ಸಾಬ್ ಇ ಖಾದರ್
- ದಿನಾಂಕ 28-03-2025 ಜಮತ್ ಉಲ್ ವಿದ
- ದಿನಾಂಕ 02-04-2025 ದೇವರ ದಾಸಿಮಯ್ಯ ಜಯಂತಿ
- ದಿನಾಂಕ 19-04-2025 ಹೋಲಿ ಸಾಟರ್ ಡೇ
- ದಿನಾಂಕ 02-05-2025 ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ
- ದಿನಾಂಕ 12-05-2025 ಬುದ್ಧ ಪೂರ್ಣಿಮಾ
- ದಿನಾಂಕ 08-08-2025 ವರ ಮಹಾಲಕ್ಷ್ಮೀ ವ್ರತ
- ದಿನಾಂಕ 16-08-2025 ಶ್ರೀಕೃಷ್ಣ ಜನ್ಮಾಷ್ಠಮಿ
- ದಿನಾಂಕ 26-08-2025 ಸ್ವರ್ಣ ಗೌರಿ ವ್ರತ
- ದಿನಾಂಕ 06-09-2025 ಅನಂತ ಪದ್ಮನಾಭ ವ್ರತ
- ದಿನಾಂಕ 08-09-2025 ಕನ್ಯಾ ಮಾರಿಯಮ್ಮ ಜಯಂತಿ
- ದಿನಾಂಕ 17-09-2025 ವಿಶ್ವ ಕರ್ಮ ಜಯಂತಿ
- ದಿನಾಂಕ 18-10-2025 ತುಲಾ ಸಂಕ್ರಮಣ
- ದಿನಾಂಕ 05-11-2025 ಗುರು ನಾನಕ್ ಜಯಂತಿ
- ದಿನಾಂಕ 05-12-2025 ಹುತ್ತರಿ ಹಬ್ಬ
- ದಿನಾಂಕ 24-12-2025 ಕ್ರಿಸ್ ಮಸ್ ಇವೇ
BREAKING NEWS: ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್’ಗೆ ಬಿಗ್ ಶಾಕ್: ಕಾರಣ ಕೇಳಿ ‘BJP ಹೈಕಮಾಂಡ್’ ನೋಟಿಸ್?
Watch Video: ಫೆಂಗಲ್ ಚಂಡಮಾರುತ ಎಫೆಕ್ಟ್: ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ: ಡಿಸಿಎಂ ಡಿ.ಕೆ ಶಿವಕುಮಾರ್