ಬೆಂಗಳೂರು: ರಾಜ್ಯ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ಕುಟುಂಬ ಪಿಂಚಣಿ ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅರ್ಜಿಯೊಂದಿಗೆ ಕೆಲ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅವುಗಳು ಯಾವುವು ಅಂತ ಮುಂದೆ ಓದಿ.
ನೋಂದಾಯಿತ ಕಾರ್ಮಿಕರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿದ್ದ ಅವಧಿಯಲ್ಲಿ ಮರಣ ಹೊಂದಿದ್ದಲ್ಲಿ ಮಾತ್ರ ಅವರ ಪತಿ/ ಪತ್ನಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿಯೊಂದಿಗೆ ಈ ಅಗತ್ಯ ದಾಖಲೆಗಳ ಸಲ್ಲಿಕೆ ಕಡ್ಡಾಯ
- ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿಯ ನಕಲು ಪ್ರತಿ
- ಪಿಂಚಣಿ ಮಂಜೂರಾತಿ ಆದೇಶ
- ರೇಷನ್ ಕಾರ್ಡ್ ಪ್ರತಿ
- ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ
- ಅವಲಂಬಿತರ ಬ್ಯಾಂಕ್ ಖಾತೆ ವಿವರ
- ಮರಣ ಪ್ರಮಾಣಪತ್ರ
- ಮೃತ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ
- ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ
- ಅರ್ಜಿದಾರರ ಕೋರಿಕೆ ಪತ್ರ
ನೋಂದಾಯಿತ ಕಾರ್ಮಿಕರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿದ್ದ ಅವಧಿಯಲ್ಲಿ ಮರಣ ಹೊಂದಿದ್ದಲ್ಲಿ ಮಾತ್ರ ಅವರ ಪತಿ/ ಪತ್ನಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.#ಶ್ರಮಮೇವ_ಜಯತೇ#KBOCWWB pic.twitter.com/d2f7MAvYl6
— Construction Workers Welfare Board (@WorkersBoard) November 29, 2024
Watch Video: ಫೆಂಗಲ್ ಚಂಡಮಾರುತ ಎಫೆಕ್ಟ್: ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್
BREAKING : ಪಶ್ಚಿಮ ಘಟ್ಟ ಪ್ರದೇಶದಲ್ಲಿ ‘ಭೂ ಕಂಪನ’ : ಶಿರಸಿ ಸೇರಿ ಹಲವೆಡೆ 3 ಸೆಕೆಂಡ್ ವರೆಗೆ ಕಂಪಿಸಿದ ಭೂಮಿ