ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಸಿನೆಮಾ ನಿರ್ಮಾಪಕ ಅರುಣ್ ರೈ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಬಳಿಯ ಆರ್‌ಎಂಸಿ ಯಾರ್ಡ್ ಅರುಣ್ ರೈ ವಿರುದ್ಧ FIR ದಾಖಲಾಗಿದೆ.
ಹೌದು ಬಂಟ್ವಾಳ ಮೂಲದ ಉದ್ಯಮಿ ನೀಡಿದ ದೂರಿನ ಅನ್ವಯ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಯಶವಂತಪುರ ಬಳಿಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ತಾಜ್ ಹೋಟೆಲ್ ನಲ್ಲಿ ನಿರ್ಮಾಪಕರು ಉದ್ಯಮಿ ಅವರನ್ನು ಪರಿಚಯಿಸಿಕೊಂಡಿದ್ದರು. ಬೆಂಗಳೂರಿನ ಯಶವಂತಪುರದಲ್ಲಿರುವ ತಾಜ್ ಹೋಟೆಲ್ ನಲ್ಲಿ ಪರಸ್ಪರ ಪರಿಚಯವಾಗಿದೆ. ತುಳು ಸಿನಿಮಾ ಜಿಟಿಗೆ ವೀರಕಂಬಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಸಿನಿಮಾದ ಲಾಭಾಂಶದಲ್ಲಿ 60 ಲಕ್ಷ ಕೊಡುವುದಾಗಿ ನಿರ್ಮಾಪಕ ಅರುಣ್ ರೈ ಉದ್ಯಮಿಗೆ ನಂಬಿಸಿದ್ದರು. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ 25 ಕೋಟಿ ನಷ್ಟವಾಗಿತ್ತು. ಗೇರು ಬೀಜ ಸಂಸ್ಕರಣ ಘಟಕದಲ್ಲಿ 25 ಕೋಟಿ ರೂಪಾಯಿ ಹಣ ನಷ್ಟವಾಗಿತ್ತು. ಉದ್ಯಮಯ ನಷ್ಟದ ಕಥೆ ಪ್ಲಸ್ ಪಾಯಿಂಟ್ ಅನ್ನು ಅರುಣ್ ರೈ ಅವರು ಮಾಡಿಕೊಂಡಿದ್ದರು. ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿ ನಷ್ಟ ಸರಿದೂಗಿಸುತ್ತೇನೆ ಅಂತ ಅರುಣ್ ರೈ ಹೇಳಿದ್ದರು.
ಅಲ್ಲದೆ ದೆಹಲಿಯಲ್ಲಿ 400 ಕೋಟಿ ಹಣ ಹೂಡಿಕೆ ಮಾಡಿದ್ದೇನೆ ಎಂದು ತಿಳಿಸಿದರು. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಬರಬೇಕಿದೆ ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಕೂಡ ಸಾಲ ಕೊಡಿಸುತ್ತೇನೆ. ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ ಬೆಂಗಳೂರಿನ ಹಲವು ಕಂಪನಿಗಳನ್ನು ತೋರಿಸಿ ಇದು ಎಲ್ಲ ನನ್ನದು ಎಂದು ನಿರ್ಮಾಪಕ ಹೇಳಿದ್ದರು.
ನಿರ್ಮಾಪಕನ ಕಂಪನಿಯಲ್ಲಿ ಶೇರು ಖರೀದಿ ಹೆಸರಿನಲ್ಲಿ ಉದ್ಯಮಿ ಹಣ ಹೂಡಿಕೆ ಮಾಡಿದ್ದಾರೆ. 9 ಕೋಟಿ ಹೆಚ್ಚು ಹಣವನ್ನು ಬಂಟ್ವಾಳ ಮೂಲದ ಉದ್ಯಮಿ ಹೂಡಿಕೆ ಮಾಡಿದ್ದಾರೆ. ಹಲವರಿಂದ ಸಾಲ ಪಡೆದು ಉದ್ಯಮಿ 9 ಕೋಟಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಈ ವೇಳೆ ನಕಲಿ ಕರಾರು ಪತ್ರ ಸೃಷ್ಟಿಸಿ ಉದ್ಯಮಿಯಿಂದ ಹಣ ಪಡೆದು ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿರ್ಮಾಪಕರು ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ ಹಾಗೂ ಕೆಪಿ ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.