ಬೆಂಗಳೂರು: ನಗರದ ಹೃದಯ ಭಾಗವೇ ಆಗಿರುವಂತ ಮೆಜೆಸ್ಟಿಕ್ ನಲ್ಲಿಯೇ ವಿದ್ಯುತ್ ಕಡಿತ ಉಂಟಾಗಿದೆ. ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಟ್ರಾಸ್ಸ್ ಫಾರ್ಮರ್ ಕೆಟ್ಟು ಹೋಗಿರುವ ಪರಿಣಾಮ ಕತ್ತಲಲ್ಲಿ ಪ್ರಯಾಣಿಕರು ಪರದಾಡುತ್ತಿರುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿಎಂಟಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತದಿಂದ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಡೆಯುತ್ತಿರುವ ಟ್ರಾನ್ಸ್ ಫಾರ್ಮರ್ ನಿರ್ವಹಣಾ ಕಾರ್ಯದ ಪರಿಣಾಮವಾಗಿ ಈ ಸ್ಥಗಿತವಾಗಿದೆ ಎಂದಿದೆ.
ಒಂದು ಗಂಟೆಯೊಳಗೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲಾಗುವುದು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ಏತನ್ಮಧ್ಯೆ, ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಗಾಗಿ ಎಲ್ಲಾ ಸಾರ್ವಜನಿಕ ಪ್ರದೇಶಗಳು ಮತ್ತು ಪ್ಲಾಟ್ ಫಾರ್ಮ್ ಗಳಲ್ಲಿ ಸಾಕಷ್ಟು ಬೆಳಕನ್ನು ಒದಗಿಸಲು ಜನರೇಟರ್ ಗಳ ಕಾರ್ಯಾಚರಣೆಯನ್ನು ನಾವು ಖಚಿತಪಡಿಸಿದ್ದೇವೆ ಎಂದಿದೆ.
BREAKING: ಬಾಣಂತಿಯರ ಸರಣಿ ಸಾವು ಕೇಸ್: ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ: ಸಿಎಂ ಸಿದ್ಧರಾಮಯ್ಯ ಘೋಷಣೆ
BREAKING: ಬಾಣಂತಿಯರ ಸಾವು ಕೇಸ್: ‘ಡ್ರಗ್ ಕಂಟ್ರೋಲರ್ ಉಮೇಶ್’ ಸಸ್ಪೆಂಡ್ – ಸಿ.ಎಂ.ಸಿದ್ದರಾಮಯ್ಯ