ಬೆಳಗಾವಿ : ತನ್ನ ಪಾಡಿಗೆ ತಾನು ಎಗ್ ರೈಸ್ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದ ಯುವಕನನ್ನು ಐವರು ಯುವಕರ ಗ್ಯಾಂಗ್ ಒಂದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ.
ಮುರಗೋಡ ಗ್ರಾಮದಲ್ಲಿ ಸೋಹೇಲ್ ಅಹಮದ್ (17) ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ. ಊರಿನಲ್ಲಿ ಸೋಹೇಲ್ ಅಹ್ಮಫ್ ಎಗ್ ರೈಸ್ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದ. ಐವರು ಯುವಕರ ಗ್ಯಾಂಗ್ ನಿಂದ ಸೋಹೈಲ್ ಅಹ್ಮದ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಕೊಲೆಗೂ ಮುನ್ನ ಸೋಹಲ್ ಗೆ ಜೀವ ಬೆದರಿಕೆ ಹಾಕಿರುವ ಕುರಿತು ಮಾಹಿತಿ ಬಂದಿದೆ.
ಸೋಹೈಲ್ ಅಹ್ಮದ್ ಕೊಲೆಗೆ ಸಂಬಂಧಪಟ್ಟಂತೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳುಚ್ಚು ತಜ್ಞರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದರೆ ಎಂದು ತಿಳಿದುಬಂದಿದೆ.