ಮಂಗಳೂರು : ಇತ್ತೀಚಿಗೆ ಕಾಫಿ ನಾಡು ಕೃಷ್ಣ ನಗರಿಯಲ್ಲಿ ನಕ್ಸಲರ ಹೆಜ್ಜೆ ಗುರುತು ಸಿಕ್ಕ 15 20 ದಿನದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್ಎಫ್ ಗುಂಡಿಗೆ ಕಾಡಿನಲ್ಲಿಯೇ ಹತನಾಗಿದ್ದ, ಇದೀಗ ಚಿಕ್ಕಮಂಗಳೂರು ಜಿಲ್ಲೆ ಸುತ್ತಮುತ್ತ ಇನ್ನು ಕರ್ನಾಟಕದ ಇವರು ನಕ್ಸಲರಿಗಾಗಿ ಶೋಧ ನಡೆಸುತ್ತಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ನಕ್ಸಲರು ಶರಣಾದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಕ್ಸಲರು ಶರಣಾಗತಿ ಆದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ. ಶರಣಾದ ಬಳಿಕ ಸರಳ ಜೀವನ ನಡೆಸಲು ಅವರಿಗೆ ಪ್ಯಾಕೇಜ್ ನೀಡಲಾಗುತ್ತದೆ.ನಕ್ಸಲರು ಮತ್ತು ಅವರ ಜೊತೆಗೆ ಇರೋರನ್ನು ಶರಣಾಗವುಂತೆ ಹೇಳಿದ್ದೇವೆ. ಒಂದು ವೇಳೆ ಏನಾದರೂ ಸರಳ ಜೀವನ ನಡೆಸಲು ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು.
ಮುಂದುವರೆದ ‘ಕೂಂಬಿಂಗ್’ ಕಾರ್ಯಾಚರಣೆ
ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ ಉಡುಪಿಯಲ್ಲಿ ಎನ್‌ಕೌಂಟರ್ ಆದ. ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ಕರ್ನಾಟಕದ 5 ನಕ್ಸಲರಿಗಾಗಿ ಇದೀಗ ಶೋಧ ಕಾರ್ಯ ತೀವ್ರಗೊಂಡಿದೆ. ಶೃಂಗೇರಿ ತಾಲೂಕಿನ ಸುತ್ತಿನ ಗುಡ್ಡದಲ್ಲಿ ನಕ್ಸಲರು ಓಡಾಡಿರುವ ಶಂಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಿನ ಗುಡ್ಡದಲ್ಲಿ ಇದೀಗ ಅವರು ಸುತ್ತಾಡಿರುವ ಶಂಕೆ ವ್ಯಕ್ತವಾಗಿದ್ದರಿಂದ ಸುತ್ತಿನಗುಡ್ಡ ಕೆರೆಕಟ್ಟೆ ಅರಣ್ಯದಲ್ಲಿ ನಕ್ಸಲೆಗಳಿಗಾಗಿ ಕೋಂಬಿಕಾರ್ಯಚರಣೆ ನಡೆಯುತ್ತಿದೆ ಕಳೆದ ನಾಲ್ಕು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದೆ.ವಿಕ್ರಂಗೌಡ ಎನ್‌ಕೌಂಟರ್ ಆದ ಬೆನ್ನಲ್ಲಿ ಮತ್ತೆ ನಕ್ಸಲರ ವದಂತಿಗಳೇ ಇಲ್ಲದಂತಾಗಿದೆ. ಹಾಗಾಗಿ ಎನ್‌ಕೌಂಟರ್ ಬಳಿಕ ನೋ ಸರೆಂಡರ್ ಎಂದು ಎಎನ್‌ಎಫ್ ಕೂಂಬಿಂಗ್ ಕಂಡು ನಕ್ಸಲರು ಜೀವ ಭಯದಲ್ಲಿ ಮತ್ತೆ ಕೇರಳಕ್ಕೆ ತೆರಳಿರಬಹುದು ಎನ್ನಲಾಗಿದೆ.