ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಮುಖ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಈ ಒಂದು ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ಬಳಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಇದೀಗ ಅಂಗವಿಕಲರ ಅನುದಾನದ ಹಣ ಕೂಡ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಅಂಧ ಚೇತನ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಆರೋಪಿಸಿದ್ದಾರೆ
ಹೌದು ಅಂಧ ಚೇತನ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಈ ಒಂದು ಆರೋಪ ಮಾಡಿದ್ದಾರೆ. ಸರ್ಕಾರದಿಂದ ವಿಕಲಚೇತನರಿಗೆ ಶೇಕಡ 80ರಷ್ಟು ಹಣ ಕಡಿತ ಮಾಡಿದ್ದಾರೆ. ಕಳೆದ ವರ್ಷ 54 ಕೋಟಿ ಹಣ ಮೀಸಲಿಟ್ಟಿದ್ದ ಸರ್ಕಾರ, ಈ ವರ್ಷ ಕೇವಲ 10 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.
ಫೆಡರೇಷನ್ ಗೆ ಮೀಸಲಿಟ್ಟ ಬಾಕಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗೌತಮ್ ಅಗರ್ವಾವಾಲ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಹಗರಣಗಳನ್ನ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದು, ಇದೀಗ ಈ ಆರೋಪ ಕೂಡ ವಿಪಕ್ಷಗಳಿಗೆ ಒಂದು ಪ್ರಬಲವಾದ ಅಸ್ತ್ರ ವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.