Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಶಾಲೆಯಲ್ಲಿ ಶುಲ್ಕ ಕಟ್ಟದಿದ್ದಕ್ಕೆ ಕಿರುಕುಳ : ವಿಷ ಸೇವಿಸಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ.!

DK Shivakumar : ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಮುಖ್ಯಮಂತ್ರಿ ಗದ್ದುಗೆಯವರೆಗೆ ಡಿ ಕೆ ಶಿವಕುಮಾರ್ ನಡೆದು ಬಂದ ಹಾದಿ

ಟ್ರಂಪ್ ಮತ್ತು ನೆತನ್ಯಾಹು ರಾಜತಾಂತ್ರಿಕ ಮಾತುಕತೆ

ನೀನು ಹುಚ್ಚ, ನೆತನ್ಯಾಹು ವಿರುದ್ಧ ಟ್ರಂಪ್‌ ಕೆಂಡಾಮಂಡಲ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ಮಿತ್ ಗ್ರೂಪ್, ಆಲ್ಕೋಬೇವ್ ವಲಯದ ಕಂಪನಿಗಳೊಂದಿಗೆ ಸಚಿವ ಎಂ.ಬಿ ಪಾಟೀಲ್ ಜಾಗತಿಕ ಹೂಡಿಕೆದಾರರ ಸಮಾವೇಶ ಕುರಿತು ಮಾತುಕತೆ
KARNATAKA

ಸ್ಮಿತ್ ಗ್ರೂಪ್, ಆಲ್ಕೋಬೇವ್ ವಲಯದ ಕಂಪನಿಗಳೊಂದಿಗೆ ಸಚಿವ ಎಂ.ಬಿ ಪಾಟೀಲ್ ಜಾಗತಿಕ ಹೂಡಿಕೆದಾರರ ಸಮಾವೇಶ ಕುರಿತು ಮಾತುಕತೆ

By ವಸಂತ ಬಿ ಈಶ್ವರಗೆರೆ

ಲಂಡನ್: ಮುಂಬರುವ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ 15 ದಿನಗಳ ಯೂರೋಪ್ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮೊದಲ ದಿನವಾದ ಗುರುವಾರ ಸ್ಮಿತ್ ಗ್ರೂಪ್ ಜತೆ ಬಂಡವಾಳ ಹೂಡಿಕೆ ಕುರಿತು ಲಂಡನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಜತೆಗೆ ಆಲ್ಕೋಬೇವ್ (ಮದ್ಯ ತಯಾರಿಕೆ) ವಲಯದ ಕಂಪನಿಗಳ ಜತೆಯೂ ಅವರು ದುಂಡುಮೇಜಿನ ಸಭೆ ನಡೆಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸ್ಮಿತ್ ಗ್ರೂಪ್ ಕರ್ನಾಟಕದಲ್ಲಿ ದೀರ್ಘಾವಧಿ ಹೂಡಿಕೆ ಮಾಡಲು ಮತ್ತು ತನ್ನ ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು ಒಲವು ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಏರೋಸ್ಪೇಸ್ ಮತ್ತು ರಕ್ಷಣಾ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಸಕ್ರಿಯವಾಗಿರುವ ಸ್ಮಿತ್ ಗ್ರೂಪ್, ತನ್ನ ವೆಟ್ ಸೀಲ್ ಜೋಡಣೆ ಚಟುವಟಿಕೆಗಳನ್ನು ಥಾಯ್ಲೆಂಡಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಅದು ಬೆಂಗಳೂರಿನಲ್ಲಿ ಈಗಾಗಲೇ 600 ಉದ್ಯೋಗಿಗಳನ್ನು ಹೊಂದಿದೆ. ಜತೆಗೆ ಕಂಪನಿಯು ತನ್ನ ಹೂಡಿಕೆ ಯೋಜನೆಗೆ ಬೆಂಗಳೂರನ್ನು ಸೂಕ್ತ ತಾಣವೆಂದು ಪುನರುಚ್ಚರಿಸಿದ್ದು, ಹೆಚ್ಚುವರಿ ಬಂಡವಾಳ ತೊಡಗಿಸಲಿದೆ ಎಂದು ಅವರು ಹೇಳಿದ್ದಾರೆ.

ಸ್ಮಿತ್ ಗ್ರೂಪ್ ಕಂಪನಿಯು ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಬೆಂಗಳೂರಿನಲ್ಲಿ ಗ್ರಾಹಕರನ್ನು ಹೊಂದಿದೆ. ತಾನು ಯೂರೋಪ್ ಮತ್ತು ಅಮೆರಿಕದಲ್ಲಿ ನಡೆಸುತ್ತಿರುವ ಟೈಟ್ ಫ್ಲೆಕ್ಸ್ ಕಾರ್ಯಾಚರಣೆಗಳ ಸ್ವಲ್ಪ ಭಾಗವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದು, ಇದಕ್ಕೆ ಅಗತ್ಯವಿರುವ ಬಂಡವಾಳವನ್ನು ಹೂಡಲಿದೆ. ಇದರಿಂದಾಗಿ ರಾಜ್ಯದಲ್ಲಿ ಈ ವಲಯದ ಉತ್ಪಾದನೆ ಹೆಚ್ಚಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮಾತುಕತೆಯಲ್ಲಿ ಸ್ಮಿತ್ ಗ್ರೂಪ್ನ ಉನ್ನತಾಧಿಕಾರಿ ಶ್ರೀಮತಿ ಕಿಣಿ ಪದ್ಮನಾಥನ್ ಉಪಸ್ಥಿತರಿದ್ದರು.

ಆಲ್ಕೋಬೇವ್ ಕಂಪನಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಡಯಾಜಿಯೋ, ಪೆರ್ನಾಡ್ ರಿಕಾರ್ಡ್ ಮತ್ತು ಬಕಾರ್ಡಿ ಕಂಪನಿಯ ಪ್ರತಿನಿಧಿಗಳು ಮತ್ತು ಯುಕೆಐಬಿಸಿ ಹಾಗೂ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಂಪನಿಗಳು ಭಾರತದ ತಮ್ಮ ಕಾರ್ಯ ಚಟುವಟಿಕೆಗಳಿಗೆ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದು, ಇಲ್ಲಿಯ ಗ್ರಾಹಕ ನೆಲೆ ಮತ್ತು ಉದ್ಯಮ ಕಾರ್ಯ ಪರಿಸರ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದವು. ಜತೆಗೆ ರಾಜ್ಯವು ಇತ್ತೀಚೆಗೆ ಕೈಗೊಂಡಿರುವ ತೆರಿಗೆ ಸುಧಾರಣೆಯು ಆಲ್ಕೋಬೇವ್ ವಲಯಕ್ಕೆ ಉಪಯುಕ್ತವಾಗಿದ್ದು, ಸುಗಮ ವಹಿವಾಟು ಸಂಸ್ಕೃತಿಯನ್ನು ವಿಸ್ತರಿಸುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ಪಾಟೀಲ ತಿಳಿಸಿದ್ದಾರೆ.

ಆಲ್ಕೋಬೇವ್ ಕಂಪನಿಗಳು ರಾಜ್ಯದಲ್ಲಿ ದೀರ್ಘಾವಧಿ ಹೂಡಿಕೆಗೆ ಮತ್ತು ಉತ್ಪಾದನೆ ವಿಸ್ತರಣೆಗೆ ತಮ್ಮ ಬದ್ಧತೆ ವ್ಯಕ್ತಪಡಿಸಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಈ ವಲಯವು ಮತ್ತಷ್ಟು ಬೆಳವಣಿಗೆ ಸಾಧಿಸುವುದು ನಿಚ್ಚಳವಾಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಯೂರೋಪಿಗೆ ತೆರಳಿರುವ ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರಿದ್ದಾರೆ.

ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ‘ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ ಇಲ್ಲಿದೆ | CM Siddaramaiah Cabinet Meeting

Good News: ದಕ್ಷಿಣ ಮಧ್ಯ ರೈಲ್ವೆ 10 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ರೈಲಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

DK Shivakumar : ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಮುಖ್ಯಮಂತ್ರಿ ಗದ್ದುಗೆಯವರೆಗೆ ಡಿ ಕೆ ಶಿವಕುಮಾರ್ ನಡೆದು ಬಂದ ಹಾದಿ

7 Mins Read

BREAKING : ನಾಳೆ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಡಿಕೆಶಿ ಪದಗ್ರಹಣಕ್ಕೆ ಲೋಕಭವನದಲ್ಲಿ ಭರ್ಜರಿ ತಯಾರಿ | WATCH VIDEO

1 Min Read
ಹುಬ್ಬಳ್ಳಿಯ ಕಾಲೇಜು ಮುಂಭಾಗದಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚುತ್ತಿರುವ ದೃಶ್ಯ

HIJAB CONTROVERSY : ಹುಬ್ಬಳ್ಳಿಯಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ, ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ

2 Mins Read
Recent News

SHOCKING : ಶಾಲೆಯಲ್ಲಿ ಶುಲ್ಕ ಕಟ್ಟದಿದ್ದಕ್ಕೆ ಕಿರುಕುಳ : ವಿಷ ಸೇವಿಸಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ.!

DK Shivakumar : ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಮುಖ್ಯಮಂತ್ರಿ ಗದ್ದುಗೆಯವರೆಗೆ ಡಿ ಕೆ ಶಿವಕುಮಾರ್ ನಡೆದು ಬಂದ ಹಾದಿ

ಟ್ರಂಪ್ ಮತ್ತು ನೆತನ್ಯಾಹು ರಾಜತಾಂತ್ರಿಕ ಮಾತುಕತೆ

ನೀನು ಹುಚ್ಚ, ನೆತನ್ಯಾಹು ವಿರುದ್ಧ ಟ್ರಂಪ್‌ ಕೆಂಡಾಮಂಡಲ

Enforcement Directorate corporate investigation and search operations in Mumbai and Delhi locations

BREAKING : ವೇದಾಂತ ಗ್ರೂಪ್ ಕಚೇರಿಗಳ ಮೇಲೆ ಇಡಿ ದಾಳಿ

State News
KARNATAKA

DK Shivakumar : ಸಾಮಾನ್ಯ ಕೃಷಿ ಹಿನ್ನೆಲೆಯಿಂದ ಮುಖ್ಯಮಂತ್ರಿ ಗದ್ದುಗೆಯವರೆಗೆ ಡಿ ಕೆ ಶಿವಕುಮಾರ್ ನಡೆದು ಬಂದ ಹಾದಿ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 7 Mins Read

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಧೀಮಂತ ಸಂಘಟನಾ ಚತುರ ಎಂದು ಗುರುತಿಸಿಕೊಂಡಿರುವ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು…

BREAKING : ನಾಳೆ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಡಿಕೆಶಿ ಪದಗ್ರಹಣಕ್ಕೆ ಲೋಕಭವನದಲ್ಲಿ ಭರ್ಜರಿ ತಯಾರಿ | WATCH VIDEO

ಹುಬ್ಬಳ್ಳಿಯ ಕಾಲೇಜು ಮುಂಭಾಗದಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚುತ್ತಿರುವ ದೃಶ್ಯ

HIJAB CONTROVERSY : ಹುಬ್ಬಳ್ಳಿಯಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ, ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ

ALERT : `LPG’ ಗ್ರಾಹಕರೇ ಗಮನಿಸಿ : ಜೂ.30ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ ಕಟ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.