ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ನಾನು ಹಿಂದೆಯೇ ಇದರ ಬಗ್ಗೆ ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಬಿಡ್ತೇನೆ. ಇದನ್ನ ಮೊದಲೇ ಹೇಳಿದ್ದೇನೆ. ಅಧ್ಯಕ್ಷ ಸ್ಥಾನ ಕೊಟ್ಟರೆ ನನಗೆ ಸಚಿವ ಸ್ಥಾನ ಬೇಡ. ಈಗಲೂ ಈಮಾತಿಗೆ ಬದ್ಧನಾಗಿದ್ದೇನೆ ಎಂಬುದಾಗಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದಂತ ಅವರು, ಅದು ಡಿಕೆ ಶಿವಕುಮಾರ್ ಅಭಿಪ್ರಾಯವಾಗಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ಏನೇ ನಿರ್ಧಾರ ಮಾಡಿದ್ರೂ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತಾರೆ. ಇದರ ಬಗ್ಗೆ ಚರ್ಚೆಯಾಗುತ್ತೋ ಇಲ್ವೋ ಗೊತ್ತಿಲ್ಲ. ಪ್ರಿಯಾಂಕ ಸಂಸದೆಯಾಗಿ ಸ್ವೇರಿಂಗ್ ಇದೆ. ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಇದೆ. ಹಾಗಾಗಿ ಮುಖ್ಯಮಂತ್ರಿಗಳು ಹೋಗ್ತಿದ್ದಾರೆ. ನಾನು ನಿನ್ನೆ ದೆಹಲಿಗೆ ಹೋಗಿದ್ದೆ. ಸಹಕಾರಿ ಸಮ್ಮೇಳನದಲ್ಲಿ ನಾನು ಭಾಗಿಯಾಗಿದ್ದೆ. ಅಮಿತ್ ಶಾ ಕೂಡ ಭಾಗವಹಿಸಿದ್ದರು. ಅದರ ವಿಚಾರ ಅಷ್ಟೇ ನಾನು ಮಾತನಾಡಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಪ್ರತಿಕ್ರಿಯಿಸಿದಂತ ಅವರು, ನಾನು ಹಿಂದೆಯೇ ಇದರ ಬಗ್ಗೆ ಹೇಳಿದ್ದೇನೆ. ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಬಿಡ್ತೇನೆ. ಇದನ್ನ ಮೊದಲೇ ಹೇಳಿದ್ದೇನೆ. ಅಧ್ಯಕ್ಷ ಸ್ಥಾನ ಕೊಟ್ಟರೆ ನನಗೆ ಸಚಿವ ಸ್ಥಾನ ಬೇಡ. ಈಗಲೂ ಈಮಾತಿಗೆ ಬದ್ಧನಾಗಿದ್ದೇನೆ ಎಂದರು.
ಹಾಸನ ಕಾಂಗ್ರೆಸ್ ಸಮಾವೇಶ ವಿಚಾರ ಮಾತನಾಡಿದಂತ ಅವರು, ಜೆಡಿಎಸ್ ಪ್ರಾಬಲ್ಯ ಎಲ್ಲಿದೆ ರೀ. ಹಾಸನದಲ್ಲಿ ರೇವಣ್ಣ ಬಿಗಿ ಹಿಡಿತ ಎಲ್ಲಿದೆ. ರೇವಣ್ಣ ಎಷ್ಟು ಲೀಡ್ ಬಂದಿತ್ತು. ಬರೀ 3 ಸಾವಿರ ಲೀಡ್ ಅಷ್ಟೇ ಅವರಿಗೆ ಬಂದಿದ್ದು. ಅದೇನಿ ದೊಡ್ಡ ಮಟ್ಟದ ಲೀಡೇ. ಅಲ್ಲಿ ಯಾವ ಪ್ರಬಲ್ಯವೂ ಜೆಡಿಎಸ್ ಗೆ ಇಲ್ಲ. ಸಿದ್ರಾಮಯ್ಯ,ಡಿಕೆಶಿ ಶಕ್ತಿವೃದ್ಧಿಸುವುದಷ್ಟೇ. ಅದಕ್ಕೆ ಅಲ್ಲಿ ನಾವು ಸಮಾವೇಶ ಮಾಡ್ತಿದ್ದೇವೆ ಎಂದರು.