ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮಿನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾ.ವಿಶ್ವಜೀತ್ ಶೆಟ್ಟಿ ಅವರು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿ ಆದೇಶ ಹೊರಡಿಸಿದರು.
ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದು, ಆರು ಜನ ಪ್ರತ್ಯಕ್ಷ ಸಾಕ್ಷಿಗಳೆಂದು ಪ್ರಾಸಿಕ್ಯೂಷನ್ ಅವರು ಹೇಳಿದ್ದಾರೆ. ಸಾಕ್ಷಿ ನರೇಂದ್ರ ಸಿಂಗ್, ಮಲ್ಲಿಕಾರ್ಜುನ್, ವಿಜಯ್ ಕುಮಾರ್ ಸೇರಿದಂತೆ ಆರು ಜನರು ಪ್ರತ್ಯಕ್ಷದರ್ಶಿಗಳೆಂದು ಹೆಸರಿಸಿದ್ದಾರೆ. ನರೇಂದ್ರ ಸಿಂಗ್ ನ ಸಿಆರ್ಪಿಸಿ 164 ಹೇಳಿಕೆಯನ್ನು ದಾಖಲಿಸಿದ್ದಾರೆ. ಈತ ರೇಣುಕಾ ಸ್ವಾಮಿ ಮೇಲೆ ಹಲ್ಲೆಯ ಬಗ್ಗೆ ಏನನ್ನು ಹೇಳಿಲ್ಲ ಎಂದು ವಾದಿಸಿದರು.
ಸಿಆರ್ಪಿಸಿ 164 ಹೇಳಿಕೆಗೆ 161 ಹೇಳಿಕೆಗಿಂತ ಹೆಚ್ಚಿನ ಮೌಲ್ಯವಿದೆ. ಹೀಗಾಗಿ ಅದನ್ನು ಓದಿದಾಗ ಹಲ್ಲೆಯನ್ನು ನೋಡಿದ್ದಾಗಿ ಹೇಳಿಲ್ಲ. ಯಾವುದೇ ಆರೋಪಿಗಳನ್ನು ನೋಡಿರುವುದಾಗಿಯೂ ಹೇಳಿಲ್ಲ. ಕಾರು ಬಂತು ಹೋಯ್ತು ಎಂಬುದನ್ನು ಅಷ್ಟೇ ಹೇಳಿದ್ದಾನೆ. 77ನೇ ಸಾಕ್ಷಿ ಮಲ್ಲಿಕಾರ್ಜುನ ಸಿಆರ್ಪಿಸಿ 164 ಹೇಳಿಕೆ ಇದ್ದು, ಜೂನ್ 11ರಂದು ವಿನಯ್, ದರ್ಶನ್ ಕೊಲೆ ಮಾಡಿದ್ದಾರೆ ಎಂದು ತಿಳಿಯಿತು ಎಂದಿದ್ದಾನೆ.ಈ ಹೇಳಿಕೆ ದರ್ಶನ್ ವಿರುದ್ಧ ಸಾಕ್ಷವಾಗುವುದಿಲ್ಲ. ಏಕೆಂದರೆ ಘಟನೆ ನಡೆದ ಮೂರು ದಿನದ ನಂತರ ಈತನಿಗೆ ಕೃತ್ಯ ತಿಳಿದಿದೆ.
ಮಧುಸೂದನ್ ಎಂಬುವನ ಹೇಳಿಕೆಯಲ್ಲೂ ಏನು ಇಲ್ಲ. ಕಾರು ಎಂಟ್ರಿ ಆಗಿರುವ ಕುರಿತಂತೆ ಆತ ಹೇಳುತ್ತಾನೆ. ಅದರಲ್ಲಿ 5 ಜನ ಇರುತ್ತಾರೆ ವಿನಯ್ ಕಾರು ಬಂದಿರುವ ಬಗ್ಗೆ ಮಧುಸೂದನ್ ಹೇಳುತ್ತಾನೆ. ಜೂನ್ 11 ರಂದು ನ್ಯೂಸ್ ಮೂಲಕ ಕೊಲೆ ತಿಳಿಯಿತೆಂದು ಹೇಳಿದ್ದಾನೆ.ಇಬ್ಬರು ಪ್ರಮುಖ ಸಾಕ್ಷಿಗಳಾದ ಕಿರಣ್, ಪುನೀತ್ ಮೇಲೆ ಪ್ರಾಸಿಕ್ಯೂಷನ್ ಅವಲಂಬಿತವಾಗಿದೆ. ಅವರು ಆರೋಪಿಗಳ ಸಹಚರರೆಂದು ಭಾವಿಸಬೇಕಾಗುತ್ತದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ A13 ದೀಪಕ್ ಕುಮಾರ್ ಶೆಡ್ ನಲ್ಲಿ ಇರುವ ಕಾರ್ಮಿಕರು. ದೀಪಕ್ ಗೆ ಈಗಾಗಲೇ ಕೋರ್ಟ್ ಜಾಮೀನು ನೀಡಿದೆ. A13 ಶೆಡ್ ಅನ್ನು ಬಳಕೆ ಮಾಡುತ್ತಿದ್ದ ಈತನು ಕೂಡ ಹಲ್ಲೆ ಮಾಡಿದವರಲ್ಲಿ ಒಬ್ಬನಾಗಿದ್ದಾನೆ. ಜೂನ್ 20 ಮತ್ತು 21 ರಂದು ಪುನೀತ್ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ದಾಖಲಾಗಿದೆ. ಕೃತ್ಯದ ಬಳಿಕ ಈತ ಬೆಂಗಳೂರಿನಲ್ಲಿ ಇದ್ದ ಎಂಬುದನ್ನು ತೋರಿಸುತ್ತದೆ.
12 ದಿನಗಳ ಬಳಿಕ ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. 9ನೇ ತಾರೀಕಿನಂದೆ ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಆದರೆ ವಿಳಂಬಕ್ಕೆ ಸಮರ್ಥ ವಿವರಣೆಯನ್ನು ಪೊಲೀಸರು ನೀಡಬೇಕಾಗುತ್ತೆ. 1ರಿಂದ 6 ರಿಮಂಡ್ ಅರ್ಜಿಗಳನ್ನು ನೀವು ಗಮನಿಸಬೇಕು. ಈ ರಿಮಾಂಡ್ ಅರ್ಜಿಗಳಲ್ಲಿ ಈ ಸಾಕ್ಷಿಯ ಉಲ್ಲೇಖವಿಲ್ಲ. ಜೂನ್ 21ಕ್ಕೂ ಮೊದಲೇ ಈತನ ಹೇಳಿಕೆ ಪಡೆದಿದ್ದರೆ ಹೇಳಬೇಕಾಗಿತ್ತು. ಆದರೆ ಜೂನ್ 22ರ ವರೆಗೆ ರಿಮಾಂಡ್ ಅರ್ಜಿಗಳಲ್ಲಿ ಈತನ ಉಲ್ಲೇಖವಿಲ್ಲ.
ವಿನಯ್ ಫೋನ್ ಮಾಡಿದಾಗ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದೇನೆ ಎಂದು ಪುನೀತ್ ಹೇಳಿದ್ದಾನೆ. ಈ ವೇಳೆ ದರ್ಶನ್ ಹಾಗೂ ಪವಿತ್ರಗೌಡ ಬಂದಿದ್ದ ವಿಚಾರ ಹೇಳದಂತೆ ಸೂಚಿಸಿದರು. ಭಾನುವಾರ ಬೆಂಗಳೂರಿಗೆ ಬಂದು ಧೂಮ್ ಹತ್ತರಂದು ಶಡ್ಗೆ ಹೋಗಿರುತ್ತೇನೆ. ವಿನಯ್ ನನ್ನ ಫೋನ್ನಲ್ಲಿದ್ದ ವಿಡಿಯೋ ಫೋಟೋ ಡಿಲೀಟ್ ಮಾಡಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಯ ದಾಖಲೆಯನ್ನು ಸಿವಿ ನಾಗೇಶ್ ಓದಿದರು.
ಕೃತ್ಯದ ಬಳಿಕ ಈತ ಬೆಂಗಳೂರಿನಲ್ಲಿ ಇದ್ದನು ಎಂಬುದಕ್ಕೆ ಆತನ ಹೇಳಿಕೆ ಸಾಕ್ಷಿ ಇದೆ. ಈತನೇ ಫೋಟೋ ತೆಗೆದಿರುವುದು ಆರೋಪಿಯೊಬ್ಬನ ಹೇಳಿಕೆ ಇದೆ. ಇತನೆ ಪವಿತ್ರ ಗೌಡರನ್ನು ಮನೆಗೆ ಕರೆದುಕೊಂಡು ಹೋಗಿದ್ದನು. ಜೂನ್ 15ರಂದು ಪ್ರತ್ಯಕ್ಷ ಸಾಕ್ಷಿಯ ಬಗ್ಗೆ ತನಿಖಾಧಿಕಾರಿಗೆ ಗೊತ್ತಿತ್ತು. ವಿಳಂಬಕ್ಕೆ ವಿವರಣೆ ನೀಡಲು ಪೊಲೀಸರು ಮುಂದುವರಿದ ತನಿಖೆ ಮಾಡಿದ್ದಾರೆ. 1,300 ಪುಟಗಳ ಮುಂದುವರಿದ ತನಿಖೆ ಮಾಡಿದ್ದಾರೆ. ತನಿಖೆಯಲ್ಲಿನ ಲೋಪ ಮುಚ್ಚಿಕೊಳ್ಳಲು ಮುಂದುವರಿದ ತನಿಖೆಯಾಗಿದೆ.
ಜೂನ್ 11ರಿಂದ ಜೂನ್ 19ರ ವರೆಗೆ ಊರುರು ತಿರುಗುತ್ತಿದ್ದೇ. ಹಾಸನ ಹುಬ್ಬಳ್ಳಿ ಬೆಂಗಳೂರು ಫುಟ್ಪಾತ್ ನಲ್ಲಿ ಮಲಗಿದ್ದೆ. ತಿರುಪತಿ ಫೋಟೋದಲ್ಲಿ ಮಲಗಿದ್ದೆ ಎಂದೆಲ್ಲಾ ಸಾಕ್ಷಿಯಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಆದರೆ ಅವೆಲ್ಲ ಸುಳ್ಳು ಎಂಬುದನ್ನು ತೋರಿಸುತ್ತೇನೆ.ಬಹಳ ತಮಾಷೆಯಾಗಿದೆ ಹೇಗೆ ತಿರುಚುತ್ತಿದ್ದಾರೆ ಎಂಬುದನ್ನು ತೋರಿಸುತ್ತೇನೆ. ಈ ಸಾಕ್ಷಿಯ ಜೂನ್ 20ರಂದು ಮೊದಲು ಹೇಳಿಕೆಯಲ್ಲಿ ಈತನ ಪ್ರಯಾಣದ ಉಲ್ಲೇಖವಿಲ್ಲ.
ಕನಕಪುರದ ಮೊಬೈಲ್ ಅಂಗಡಿ ಯಲ್ಲಿ ಫೋಟೋ ತೆಗೆದುಕೊಂಡೆ, ನೋಕಿಯಾ ಬೇಸಿಕ್ ಫೋನ್ ತೆಗೆದುಕೊಂಡೆ. ಹಳೆಯ ಮೊಬೈಲ್ ಸಿಮ್ ತೆಗೆದು ಹೊಸ ಮೊಬೈಲಿಗೆ ಹಾಕಿರುತ್ತೇನೆ. ಜೂನ್ 1ರಿಂದ 19ರವರೆಗೂ ಊರುರು ತಿರುಗುತ್ತಿದ್ದೆ ಎಂದಿದ್ದಾನೆ. ಕಾಲ್ ಡೀಟೇಲ್ಸ್ ನಲ್ಲಿ ಒಂದು ಕೂಡ ಕಾಲ್ಸ್ ಇಲ್ಲ. ಟವರ್ ಲೊಕೇಶನ್ ನಲ್ಲೂ ಕೂಡ ಈ ಫೋನ್ ಬೆಂಗಳೂರಿನಲ್ಲೇ ಇತ್ತು ಎಂದು ತೋರಿಸಿದೆ. ಈ ಮೊಬೈಲ್ ಯಾರೂ ಬಳಸದಿದ್ದರೂ ಬೆಂಗಳೂರಿನಲ್ಲೇ ಅಲ್ಲಿಂದಿಲ್ಲಿಗೆ ಓಡಾಡಿದೆ. ಫೋಟೋವನ್ನು ಕೂಡ ಹೇಗೆ ತಿರುಚಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ವಾದಿಸಿದರು.
ಸಾಕ್ಷಿ ತೆಗೆದುಕೊಂಡು ಹೋಗಿದ ಮೊಬೈಲ್ ಫೋನಿನ ಲೊಕೇಶನ್ ಇವರು ಕಲೆಹಾಕಿಲ್ಲ. ಮನೆಯಲ್ಲಿ ಇಟ್ಟಿದಂತಹ ಫೋನ್ ಅಲ್ಲಿಂದ ಇಲ್ಲಿಗೆ ಓಡಾಡಿದ್ದೆಗೆ ಜೂನ್ 13 ರಿಂದ ತೋರಿಸಿದೆ. ಮನೆಯಲ್ಲಿ ಇಟ್ಟಿದ್ದ ಫೋನ್ ಅಲ್ಲಿಂದಿಲ್ಲಿಗೆ ಹೇಗೆ ಓಡಾಡಿತು? ಈ ವೇಳೆ ಕೋರ್ಟ್ ಜಡ್ಜ್ ಇವೆಲ್ಲವೂ ಟ್ರಯಲ್ ವೇಳೆ ಸಾಬೀತಾಗಿರುವಂತಹ ವಿಚಾರಗಳು.ಈ ಹಂತದಲ್ಲಿ ನಾವು ಮಿನಿ ಟ್ರಯಲ್ ನಡೆಸಲಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ಈತ ಬೆಂಗಳೂರಿನಲ್ಲಿ ಇದ್ದ ಎಂಬುದಕ್ಕೆ ನಾವು ಈ ಅಂಶಗಳನ್ನು ಹೇಳುತ್ತಿದ್ದೇವೆ. ಸಾಕ್ಷಿ ಹೆದರಿ ಗೋವಾಗೆ ಹೋಗಿದ್ದಾನೆಂದು ಹೇಳಿದ್ದಾರೆ. ಆದರೆ ಮೇ 21ರಂದು ಗೋವಾಗೆ ಟಿಕೆಟ್ ಬುಕ್ ಆಗಿದೆ ಇದೊಂದೇ ಸಾಕು ಬೇರೇನು ಹೇಳುವ ಅಗತ್ಯವಿಲ್ಲ. ಮೇ 21 ರಂದೆ ಸಾಕ್ಷಿಯು ಗೋವಾ ಟ್ರಿಪ್ ಗೆ ಟಿಕೆಟ್ ಬುಕ್ ಮಾಡಿದ್ದ, ಆದರೆ ಹೆದರಿಕೊಂಡು ಈತ ಗೋವಾಗೆ ಹೋಗಿದ್ದಾನೆ ಎಂಬುದನ್ನು ಹೇಳಿದ್ದಾರೆ. ಈ ವೇಳೆ ನ್ಯಾಯಾಧೀಶರು ಆದರೆ ಈತ ಗೋವಾಗಿ ಹೋಗಿದ್ದಂತೂ ನಿಜವೇ ತಾನೆ? ಎಂದು ಜಡ್ಜ್ ನ್ಯಾ. ವಿಶ್ವಜೀತ ಶೆಟ್ಟಿ ಅವರು ಪ್ರಶ್ನಿಸಿದರು.
ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಆರೋಪಿಯೊಬ್ಬನ ವೈಟ್ ಶರ್ಟ್, ಬ್ಲೂ ಜೀನ್ಸ್ ಹಾಕಿರುವ ಫೋಟೋ ಇದೆ. ಈ ಬಟ್ಟೆಗಳನ್ನು ಪೊಲೀಸರು ಹಾಜರುಪಡಿಸಿದ್ದಾರೆ.ಪ್ಯಾಂಟನ್ನೇ ಬದಲಿಸಿದ್ದಾರೆ ಎಂದರೆ ತಿರುಚಿರುವುದು ಬಹಳ ಚೆನ್ನಾಗಿದೆ. ಎಂದು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಫೋಟೋ ತೋರಿಸಿ ರೇಣುಕಾ ಸ್ವಾಮಿಯನ್ನು ಕರೆತಂದ ಆರೋಪಿಯ ಫೋಟೋ ತೋರಿಸಿ ವಾದ ಮಂಡಿಸಿದರು.
ಕೃತ್ಯದ ದಿನ ಬಟ್ಟೆಗಳನ್ನು ತೋರಿಸುತ್ತೇನೆ ಎಂದು ಆರೋಪಿ ಹೇಳಿದ್ದ ಜೂನ್ 15ರಂದು ಪೊಲೀಸರು ರಿಕವರಿ ಮಾಡಿರುವುದು ಬೇರೆ ಬಟ್ಟೆ. ಅದಕ್ಕೆ ವಿವರಣೆ ಪಡೆಯಲು ಪೊಲೀಸರು ಮುಂದುವರಿದ ತನಿಖೆಯನ್ನು ಮಾಡಿದ್ದಾರೆ. ಬಟ್ಟೆ ಬದಲಿಸಿದೆ ಹೆಣ ಸಾಗಿಸುವಾಗ ಬೇರೆ ಬಟ್ಟೆ ಹಾಕಿದ್ದೆ ಹೀಗೆಂದು ಪೊಲೀಸರು ಮುಂದುವರಿದ ತನಿಖೆಯಲ್ಲಿ ಹೇಳಿಕೆಯನ್ನು ಪಡೆದಿದ್ದಾರೆ. ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ. ಹಾಗಾಗಿನೇ ತನಿಖೆ ಮುಂದುವರೆದ ಭಾಗದಲ್ಲಿ ಈ ತರದ ಹೇಳಿಕೆ ಪಡೆದುಕೊಂಡಿದ್ದೀರಿ ಎಂದು ವಾದಿಸಿದರು.
ನೀಲಿ ಬಣ್ಣದ ಪ್ಯಾಂಟ್ ಎಂದು ಪೊಲೀಸರು ರಿಕವರಿ ಮಾಡಿದ್ದರು. ಆದರೆ ನಾನು ಧರಿಸಿದ್ದು ಬೂದು ಬಣ್ಣದ ಪ್ಯಾಂಟ್ ಎಂದು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಕೃತ್ಯದ ದಿನ ಬಟ್ಟೆಗಳನ್ನು ತೋರಿಸುತ್ತೇನೆ ಎಂದು ಆರೋಪಿ ಹೇಳಿದ್ದ. ಆದರೆ ಜೂನ್ 15ರಂದು ಪೊಲೀಸರು ರಿಕವರಿ ಮಾಡಿರುವುದು ಬಟ್ಟೆಯೇ ಬೇರೆ. ಕೊಲ್ಲುವ ಉದ್ದೇಶವಿದ್ದಿದ್ದರೆ ನಟ ದರ್ಶನ್ ಊಟ ತಂದು ಕೊಡಿ ಅಂತ ಯಾಕೆ ಹೇಳುತ್ತಿದ್ದರು? ನೀರು ತಂದು ಕೊಡಿ ಅಂತ ಹೇಳಿ ಪೊಲೀಸರ ಮುಂದೆ ಹಾಜರುಪಡಿಸಿ ಅಂತ ಯಾಕೆ ಹೇಳುತ್ತಿದ್ದರು? ಅವನ ವಿಡಿಯೋ ಮಾಡಿಕೊಳ್ಳಿ ಹೀಗೆಂದು ದರ್ಶನ್ ಹೇಳುತ್ತಿದ್ದರೆ? ಎಂದು ವಾದಿಸಿದರು.
ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಮರ್ಮಾಂಗಕ್ಕೆ ಒದ್ದರು. ಪವಿತ್ರಗೌಡ ಚಪ್ಪಲಿ ತೆಗೆದುಕೊಂಡು ದರ್ಶನ್ ಹೊಡೆದಿದ್ದಾರೆ. ನಾಗರಾಜು ತಂದೆ ಹಗ್ಗದಲ್ಲಿ ರೇಣುಕಾ ಸ್ವಾಮಿ ಬೆನ್ನಿಗೆ ಹೊಡೆದಿದ್ದಾರೆ. ಆದರೆ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ವೈರುಧ್ಯಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. 161 ಹೇಳಿಕೆಗೂ 164 ಹೇಳಿಕೆಗೂ ತುಂಬಾ ವ್ಯತ್ಯಾಸಗಳಿವೆ. 161 ಹೇಳಿಕೆ ಪಡೆದಾಗ ಕೇಸ್ ಡೈರಿಯಲ್ಲಿ ಎಂಟ್ರಿ ಮಾಡಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್‍ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿ ಪಾಲಿಸಿಲ್ಲ ಎಂದು ವಾದಿಸಿದರು.
ಮೊದಲ ರಿಮಾಂಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆಗಳ ಉಲ್ಲೇಖ ಇಲ್ಲ. ಜೂನ್ 22ರ ರಿಮಾಂಡ್ ಅರ್ಜಿಯಲ್ಲಿ ಮಾತ್ರ ಸಾಕ್ಷಿಗಳ ಹೇಳಿಕೆ ಉಲ್ಲೇಖವಿದೆ.ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷಿಗಳ ಹೆಸರುಗಳನ್ನು ಕೂಡ ಅದರಲ್ಲಿ ನಮೂದಿಸಿಲ್ಲ ಜೀವಕ್ಕೆ ಅಪಾಯ ಗೌಪ್ಯತೆ ಕಾಪಾಡಬೇಕಿರುವುದರಿಂದ ಹೆಸರನ್ನು ನಮೂದಿಸುವುದಿಲ್ಲ ಹೀಗೆ ಎಂದು ವಿವರಣೆ ಕೊಟ್ಟಿದ್ದಾರೆ ಇದು ಕಾನೂನು ಬಾಹಿರವಾಗಿದೆ.ಸಾಕ್ಷಿಗಳ ಹೆಸರು, ವಿಳಾಸ, ಹೇಳಿಕೆಯ ವಿವರಗಳನ್ನು ರಿಮಾಂಡ್ ಅರ್ಜಿಯಲ್ಲಿ ಸಲ್ಲಿಸಬೇಕು. ಆದರೆ ಯಾವುದೇ ಪ್ರಕ್ರಿಯೆಯನ್ನು ತನಿಖಾಧಿಕಾರಿ ಪಾಲಿಸಿಲ್ಲ. ಸಾಕ್ಷಿಗಳ ಹೇಳಿಕೆ ಪಡೆಯಲು ಮೂರು ಜನ ವಿಳಂಬವಾದರೂ ಜಾಮೀನು ಸಿಕ್ಕಿದೆ ಎಂದು ಸುಪ್ರೀಂ ಕೋರ್ಟ್ ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಸಿವಿ ನಾಗೇಶ್ ವಾದ ಮಂಡಿಸಿದರು.
ವಾದ ಅಂತ್ಯಗೊಳಿಸಿದ ಬಳಿಕ ನ್ಯಾಯಾಧೀಶರು ಈಗ ನಿಮ್ಮ ದರ್ಶನ್ ಆರೋಗ್ಯ ಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಸಿವಿ ನಾಗೇಶ್ ಅವರು, ಬಿಪಿ ವೇರಿಯೇಷನ್ ನಿಂದ ಸರ್ಜರಿ ಮಾಡಲು ಆಗುತ್ತಿಲ್ಲ. ಆದರೆ ವೈದ್ಯರು ತುರ್ತು ಸರ್ಜರಿ ಅಗತ್ಯವಿದೆ ಎಂದು ವರದಿ ಕೊಟ್ಟಿದ್ದಾರಲ್ಲ ಎಂದು ಜಡ್ಜ್ ಮತ್ತೆ ಪ್ರಶಸ್ತಿದಾಗ ಹೌದು ಆದರೆ ದರ್ಶನ್ ದೇಹದಲ್ಲಿ ರಕ್ತದೊತ್ತಡ ಏರುಪೇರಾಗುತ್ತಿರುವುದರಿಂದ ಸರ್ಜರಿ ಮಾಡಲು ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ದರ್ಶನ್ ಆರೋಗ್ಯದ ಸ್ಥಿತಿ ಹೇಗಿದೆ ಎಂದು ಜಡ್ಜ್ ಕೇಳಿದಾಗ , MRI ಸ್ಕ್ಯಾನ್ ಆಗಿದೆ.ಆದರೆ ಬಿಪಿ ಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಬಿಪಿ ಸರಿ ಹೋಗದೆ ಯಾವುದೇ ಟ್ರೀಟ್ಮೆಂಟ್ ಕೊಡಲು ಆಗುವುದಿಲ್ಲ. ಸರ್ಜರಿ ಬಗ್ಗೆ ವೈದ್ಯರು ತೀರ್ಮಾನಿಸುತ್ತಾರೆ. ಈ ವೇಳೆ ವೈದ್ಯರು ತುರ್ತು ಸರ್ಜರಿ ಅಗತ್ಯವೆಂದು ವರದಿ ನೀಡಿದ್ದರಲ್ಲವೇ ಎಂದು ಜಡ್ಜ್ ಕೇಳಿದರು. ಹೌದು ಆದರೆ ಬಿಪಿ ವೇರಿಯೇಷನ್ ಆಗುತ್ತಿರುವುದರಿಂದ ಏನು ಮಾಡಲು ಆಗುತ್ತಿಲ್ಲ. ನಾನು ಇನ್ನೂ ಕೆಲವು ವಿಚಾರ ಹೇಳುವುದಿತ್ತು. ಆದರೆ ತಾವು ಈ ಹಂತದಲ್ಲಿ ಅಗತ್ಯವಿಲ್ಲವೆಂದು ಹೇಳಿದ್ದರಿಂದ ಹೇಳುತ್ತಿಲ್ಲ ಎಂದು ವಾದ ಅಂತ್ಯಗೊಳಿಸಿದರು.