ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ಮೂತ್ರ ವಿಸರ್ಜನೆ ಮಾಡಲು ತೆರಳಿದ್ದ ವೇಳೆ, ತುಂಡಾದಂತಹ ಸರ್ವಿಸ್ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನಡೆದಿದೆ.
ಮೃತ ಬಾಲಕಿಯನ್ನು 2ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಗೌಳಿ(8) ಮೃತ ವಿದ್ಯಾರ್ಥಿನಿ. ಬೋರ್‌ವೆಲ್ ಅಳವಡಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ವೈರ್ ತುಂಡಾಗಿ ಶಾಲೆಯ ಶೌಚಾಲಯ ಒಳಗೆ ಬಿದ್ದಿತ್ತು. ಆದ್ರೆ, ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಸಾನ್ವಿ, ಆ ತುಂಡಾಗಿ ಸರ್ವಿಸ್ ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿದ್ದಾಳೆ.
ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಎಂದಿನಂತೆ ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಶಾಲೆಯ ಶೌಚಾಲಯದೊಳಗೆ ಹೋಗಿದ್ದಾಳೆ. ಈ ವೇಳೆ ಹೊರಗಡೆ ಶೌಚಾಲಯದ ಬಳಿಯೇ ಬೋರ್‌ವೆಲ್‌ಗೆ ಹಾಕಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಮಾಡಲಾಗಿದ್ದ ವೈರ್ ಶೌಚಾಲಯದೊಳಗೆ ಬಿದ್ದಿದೆ. ಅದನ್ನು ಗಮನಿಸದ ಮಗು ಹಾಗೆ ಒಳ ಹೋಗಿದ್ದಾಳೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಹೆಸ್ಕಾಂ ಹಾಗೂ ಮುಖ್ಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಸದ್ಯ ವಿದ್ಯಾರ್ಥಿನಿ ಸಾನ್ವಿ ಮೃತದೇಹವನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನು ಈ ವಿಷಯ ತಿಳಿದು ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಆಸ್ಪತ್ರಗೆ ಭೇಟಿ ನೀಡಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.